Ramanagara: ಬಿಡದಿಯಲ್ಲಿ ಹಲವು ಸೌಲಭ್ಯಗಳ ಸಮುದಾಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್

Arun Kumar Belly

|

Updated on: Mar 02, 2023 | 12:54 PM

ಸಚಿವರು ರಾಮನಗರ ಉಸ್ತುವಾರಿ ಸಚಿವ ಡಾ ಸಿ ಎನ್ ಆಶ್ವಥ್ ನಾರಾಯಣ ಶಾಸಕ ಎ ಮಂಜುನಾಥ ಹಾಗೂ ಹಲವು ಅಧಿಕಾರಿಗಳ ಜೊತೆಗೂಡಿ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವೀಕ್ಷಿಸಿದರು.

ರಾಮನಗರ: ಜಿಲ್ಲೆಯ ಬಿಡದಿಯಲ್ಲಿ ಬಹು ಸೌಲಭ್ಯಗಳ ಸಮುದಾಯ ಆರೋಗ್ಯ ಕೇಂದ್ರವೊಂದನ್ನು ಅರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಇಂದು ಬೆಳಗ್ಗೆ ಉದ್ಘಾಟಿಸಿದರು. ನಂತರ ಸಚಿವರು ರಾಮನಗರ ಉಸ್ತುವಾರಿ ಸಚಿವ ಡಾ ಸಿ ಎನ್ ಆಶ್ವಥ್ ನಾರಾಯಣ (Dr CN Ashwath Narayan), ಶಾಸಕ ಎ ಮಂಜುನಾಥ (A Manjunath) ಹಾಗೂ ಹಲವು ಅಧಿಕಾರಿಗಳ ಜೊತೆಗೂಡಿ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಕೇಂದ್ರದ ಬಗ್ಗೆ ಕೆಲ ವಿವರಗಳನ್ನು ಸುಧಾಕರ್ ಅವರಿಗೆ ಮತ್ತು ಆರೋಗ್ಯ ಸಚಿವರು ಕೆಲ ಸಲಹೆ ಅಧಿಕಾರಿಗಳಿಗೆ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada