ಡಾ ಮಂಜುನಾಥ್ ಜೆಡಿಎಸ್ ಪಕ್ಷವಲ್ಲ, ಬಿಜೆಪಿಯ ಅಭ್ಯರ್ಥಿ; ಪಕ್ಷದ ವರಿಷ್ಠರು ಅವರನ್ನು ಇಷ್ಟಪಟ್ಟಿದ್ದಾರೆ: ಜಿಟಿ ದೇವೇಗೌಡ

|

Updated on: Mar 19, 2024 | 7:14 PM

ಈ ದ್ವಂದ್ವ, ಗೊಂದಲ ಬಗ್ಗೆ ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡರನ್ನು ಕೇಳಿದರೆ, ಡಾ ಮಂಜುನಾಥ್ ತಮ್ಮ ಪಕ್ಷದ ಅಭ್ಯರ್ಥಿಯೇ ಅಲ್ಲ, ಅವರು ಬಿಜೆಪಿಯ ಕ್ಯಾಂಡಿಡೇಟ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳುತ್ತಾರೆ.

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ ಡಿ ದೇವೇಗೌಡ (HD Devegowda) ಅವರ ಅಳಿಯ ಡಾ ಸಿಎನ್ ಮಂಜುನಾಥ (Dr CN Manjunath) ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದು ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಮಾಡಿಕೊಂಡಿರುವ ಸೀಟು ಹೊಂದಾಣಿಕೆ ಮೇಲೆ ಪ್ರಭಾವ ಬೀರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕೇವಲ ಎರಡು ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಸಿದೆಯೇ? ಬಿಜೆಪಿ ನಾಯಕರ ಧೋರಣೆ ಮತ್ತು ಕುಮಾರಸ್ವಾಮಿಯವರ ಅನ್ಯಮನಸ್ಕತೆ ಗಮನಿಸುತ್ತಿದ್ದರೆ ಕನ್ನಡಿಗರಿಗೆ ಹಾಗೆ ಅನ್ನಿಸದಿರದು. ಮಂಜುನಾಥ ಅವರ ಹೆಸರು ಪ್ರಪೋಸ್ ಮಾಡಿ ಕುಮಾರಸ್ವಾಮಿ ಮಾಸ್ಟರ್ ಸ್ಟ್ರೋಕ್ ಅಡಿದ ಸಂತಸದಲ್ಲಿದ್ದರು. ಆದರೆ ಅವರು ಚಾಪೆ ಕೆಳಗೆ ತೂರಿದರೆ ಬಿಜೆಪಿ ನಾಯಕರು ರಂಗೋಲಿ ಕೆಳಗೆ ತೂರಿದ್ದಾರೆ! ಈ ದ್ವಂದ್ವ, ಗೊಂದಲ ಬಗ್ಗೆ ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡರನ್ನು (GT Devegowda) ಕೇಳಿದರೆ, ಅವರು ಡಾ ಮಂಜುನಾಥ್ ತಮ್ಮ ಪಕ್ಷದ ಅಭ್ಯರ್ಥಿಯೇ ಅಲ್ಲ, ಅವರು ಬಿಜೆಪಿಯ ಕ್ಯಾಂಡಿಡೇಟ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳುತ್ತಾರೆ. ಡಾ ಮಂಜುನಾಥ್ ಯಾವತ್ತೂ ರಾಜಕೀಯದ ಬಗ್ಗೆ ಮಾತಾಡಿಲ್ಲ, ಅವರಿಗೆ ರಾಜಕೀಯ ಅನ್ನೋದು ಗೊತ್ತಿಲ್ಲ, ಅವರ ಜನಪ್ರಿಯತೆಯನ್ನು ನೋಡಿ ಬಿಜೆಪಿ ನಾಯಕರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:    ನಮ್ಮ ನೋವು ಅರ್ಥವಾದರೆ ಜೀವಂತವಾಗಿದ್ದೇವೆ, ಬೇರೆಯವರ ನೋವು ಅರ್ಥವಾದರೆ ಮನುಷ್ಯರಾಗಿದ್ದೇವೆ ಅಂತರ್ಥ: ಡಾ ಸಿಎನ್ ಮಂಜುನಾಥ್

Follow us on