ನಮ್ಮ ನೋವು ಅರ್ಥವಾದರೆ ಜೀವಂತವಾಗಿದ್ದೇವೆ, ಬೇರೆಯವರ ನೋವು ಅರ್ಥವಾದರೆ ಮನುಷ್ಯರಾಗಿದ್ದೇವೆ ಅಂತರ್ಥ: ಡಾ ಸಿಎನ್ ಮಂಜುನಾಥ್
ಚುನಾವಣೆ ಮತ್ತು ರಾಜಕಾರಣದಲ್ಲಿ ಪರಸ್ಪರ ಟೀಕೆ ನಿಂದನೆಗಳು ಬೇಡ, ಅವು ಕೇವಲ ಮಾಧ್ಯಮಗಳಿಗೆ ಆಹಾರವಾಗುತ್ತವೆಯೇ ಹೊರತು ನಮಗೆ ಪ್ರಯೋಜನ ವಾಗುವುದಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿಯಾಗಿ ಹೆಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿಯವರು ಮಾಡಿರುವ ಸಾಧನೆಗಳ ಮೇಲೆ ಚುನಾವಣೆ ಎದುರಿಸೋಣ ಎಂದು ಡಾ ಮಂಜುನಾಥ್ ಹೇಳಿದರು.
ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾಅ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ (Dr CN Manjunath) ಅವರಂಥ ಮೇಧಾವಿಗಳು ರಾಜಕೀಯ ಕ್ಷೇತ್ರಕ್ಕೆ (political field) ಯಾಕೆ ಬೇಕು ಅನ್ನೋದು ಅವರ ಮಾತುಗಳಿಂದ ಅರ್ಥಮಾಡಿಕೊಳ್ಳಬಹುದು. ನಿನ್ನೆ ಆರ್ ಅರ್ ವಿಧಾನಸಭಾ ಕ್ಷೇತ್ರದಲ್ಲಿ ಮಾತಾಡಿದ ಅವರು ಒಬ್ಬ ವೈದ್ಯನಂತೆ ಮಾತಾಡುವುದು ನಿಜವಾದರೂ ರಾಜಕಾರಣದ ಒಳಹೊರಗುಗಳನ್ನು ಅರ್ಥಮಾಡಿಕೊಂಡಿದ್ದಾರೆ. ಅವರು ಒಂದು ಸರಳವಾದ ಮಾತು ಹೇಳುತ್ತಾರೆ-ನಮ್ಮ ನೋವು (pain) ನಮಗೆ ಅರ್ಥವಾದರೆ ನಾವು ಬದುಕಿದ್ದೇವೆ ಅಂತರ್ಥ, ಬೇರೆಯವರ ನೋವು ಅರ್ಥವಾದರೆ ಮನುಷ್ಯರಾಗಿದ್ದೇವೆ ಅಂತರ್ಥ! ಆಯುಷ್ಮಾನ್ ಭಾರತ್ ಯೋಜನೆಯಲ್ಲಿರುವ ನ್ಯೂನತೆಗಳನ್ನು ಕೇವಲ ಡಾ ಮಂಜುನಾಥ್ ಮಾತ್ರ ಹೇಳಬಲ್ಲರು. ಚುನಾವಣೆ ಮತ್ತು ರಾಜಕಾರಣದಲ್ಲಿ ಪರಸ್ಪರ ಟೀಕೆ ನಿಂದನೆಗಳು ಬೇಡ, ಅವು ಕೇವಲ ಮಾಧ್ಯಮಗಳಿಗೆ ಆಹಾರವಾಗುತ್ತವೆಯೇ ಹೊರತು ನಮಗೆ ಪ್ರಯೋಜನ ವಾಗುವುದಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿಯಾಗಿ ಹೆಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿಯವರು ಮಾಡಿರುವ ಸಾಧನೆಗಳ ಮೇಲೆ ಚುನಾವಣೆ ಎದುರಿಸೋಣ ಎಂದು ಡಾ ಮಂಜುನಾಥ್ ಹೇಳಿದರು. ವಾಟ್ಸ್ಯಾಪ್ ಯೂನಿವರ್ಸಿಟಿಯಲ್ಲಿ ಹರಿದಾಡುವ ಸುಳ್ಳುಗಳನ್ನು ನಂಬಿ ನಾವು ಬದುಕುವುದು ಬೇಡ, ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಾ ಮಂಜುನಾಥ್ ಮನವೊಲಿಸುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ: ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಬಹುತೇಕ ಖಚಿತ