ಶಿವಕುಮಾರ್ ನೋಟೀಸ್ ಜಾರಿ ಮಾಡ್ತೀನಿ ಅಂದಾಕ್ಷಣ ಶಾಸಕ ಇಕ್ಬಾಲ್ ಹುಸ್ಸೇನ್ ಮುಖದಲ್ಲಿ ಪ್ರೇತಕಳೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jul 01, 2025 | 5:12 PM

ಮಾಧ್ಯಮದವರಿಂದ ಹೇಗಾದರೂ ತಪ್ಪಿಸಿಕೊಂಡೇನು ಎಂಬ ಚಡಪಡಿಕೆ ಇಕ್ಬಾಲ್ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತಿತ್ತು. ನೋಟೀಸ್ ಜಾರಿಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದ ಬಳಿಕ ನಿಮ್ಮ ನಿಲುವಿನಲ್ಲಿ ಬದಲಾವಣೆಯಾಗುತ್ತಾ ಅಂತ ನಮ್ಮ ವರದಿಗಾರ ಕೇಳಿದರೆ ಯಾವ ಬದಲಾವಣೆಯೂ ಇಲ್ಲ, ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಇಕ್ಬಾಲ್ ಹುಸ್ಸೇನ್ ಹೇಳಿದರು.

ಬೆಂಗಳೂರು, ಜುಲೈ 1: ಅವನ್ಯಾರು ಮಾತಾಡೋಕ್ಕೆ, ನೋಟೀಸ್ ಜಾರಿ ಮಾಡ್ತೀನಿ ಅಂತ ಡಿಕೆ ಶಿವಕುಮಾರ್ (DK Shivakumar) ಹೇಳಿದಾಕ್ಷಣ ರಾಮನಗರ ಶಾಸಕ ಇಕ್ಬಾಲ್ ಹುಸ್ಸೇನ್ ಮುಖದಲ್ಲಿ ಪ್ರೇತಕಳೆ. ನಮ್ಮ ವರದಿಗಾರ ಕೇಳುವ ಪ್ರಶ್ನೆಗಳಗೆ ಆವರಲ್ಲಿ ಉತ್ತರವೇ ಇಲ್ಲ. ಇವತ್ತು ರಂದೀಪ್ ಸುರ್ಜೆವಾಲಾ ಅವರೊಂದಿಗೆ ಮಾತಾಡಲು ಇಕ್ಬಾಲ್ ಕೆಪಿಸಿಸಿ ಕಚೇರಿಗೆ ಬಂದಾಗ ಸಿಎಂ ಬದಲಾವಣೆ ವಿಚಾರ ಮಾತಾಡ್ತೀರಾ ಅಂತ ಟಿವಿ9 ವರದಿಗಾರ ಕೇಳಿದರೆ, ನೋಡೋಣ, ಮಾತಾಡೋಣ ಅಂತ ಕ್ಷೀಣಧ್ವನಿಯಲ್ಲಿ ಪ್ರತಿಕ್ರಿಯೆ! ಅವರನ್ನು ಮಾಧ್ಯಮದವರು ಸುತ್ತುವರಿದಿದ್ದು ಅಚ್ಚರಿಯ ವಿಷಯವೇನೂ ಅಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಅವರು ಮಾಧ್ಯಮಗಳಿಗೆ ನೀಡುತ್ತಿದ್ದ ಹೇಳಿಕೆಗಳಲ್ಲಿ ಬರೀ ಶಿವಕುಮಾರ್ ಇಷ್ಟರಲ್ಲೇ ಸಿಎಂ ಆಗಲಿದ್ದಾರೆ ಅನ್ನೋದು ಪ್ರಮುಖವಾಗಿರುತಿತ್ತು.

ಇದನ್ನೂ ಓದಿ:  ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಸಂಚಲನ ಮೂಡಿಸಿದ ಕೈ ಶಾಸಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.