Watch Video: ಇದೆಂಥಾ ದ್ವೇಷ, ಮಗುವಿದ್ದ ಕಾರಿಗೆ ಎರಡೆರಡು ಬಾರಿ ಗುದ್ದಿದ ಮತ್ತೊಂದು ಕಾರು
ಮಗು ಸೇರಿದಂತೆ ನಾಲ್ವರಿದ್ದ ಕಾರಿಗೆ ಮತ್ತೊಂದು ಕಾರು ಎರಡೆರಡು ಬಾರಿ ಗುದ್ದಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಗುದ್ದಿದ್ದು ಮತ್ಯಾರೂ ಅಲ್ಲ ಆ ಮಗುವಿನ ತಂದೆ. ಮಗುವಿನ ಮೇಲೆ ಯಾಕಿಷ್ಟು ಕೋಪ, ನಿಜವಾದ ಕಥೆ ಏನು ಇಲ್ಲಿದೆ ಮಾಹಿತಿ.
ಥಾಣೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು, ಎಸ್‌ಯುವಿ ಚಾಲಕನೊಬ್ಬ ಎರಡೆರಡು ಬಾರಿ ಕಾರಿಗೆ ಗುದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಪ್ಪು ಬಣ್ಣದ ಎಸ್‌ಯುವಿ ಜನನಿಬಿಡ ರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆಯುವುದನ್ನು ವಿಡಿಯೋದರಲ್ಲಿ ಕಾಣಬಹುದು.
ಕಪ್ಪು ಬಣ್ಣದ ಎಸ್‌ಯುವಿ ಬಿಳಿ ಬಣ್ಣದ ಕಾರಿಗೆ ಹೊಡೆಯುತ್ತಿರುವುದನ್ನು ವೀಡಿಯೊ ತೋರಿಸಿದೆ. ಬಳಿಕ ಕಾರು ಮುಂದೆ ಹೋಗಿ ಯೂಟರ್ನ್ ತೆಗೆದುಕೊಂಡು ಬಂದು ಎದುರಿನಿಂದ ಮತ್ತೆ ಡಿಕ್ಕಿ ಹೊಡೆದಿದೆ.
ಕಪ್ಪು ಬಣ್ಣದ ಎಸ್‌ಯುವಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದ, ನಂತರ ಕುಟುಂಬ ಸದಸ್ಯರು
ಮಧ್ಯ ಪ್ರವೇಶಿಸಿ ಮಹಿಳೆ ಹಾಗೂ ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು.ಇದರಿಂದ ಕೋಪಗೊಂಡ ವ್ಯಕ್ತಿ ತನ್ನ ಕಾರನ್ನು ಪತ್ನಿ ಹಾಗೂ ಮಗು ಕುಳಿತಿದ್ದ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ.
ಘಟನೆಯ ಪರಿಣಾಮವಾಗಿ ರಸ್ತೆಯಲ್ಲಿ ನಿಂತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಬೈಕ್ ಸವಾರರನ್ನೂ ಕಪ್ಪು ಬಣ್ಣದ ಎಸ್‌ಯುವಿ ಡಿಕ್ಕಿ ಹೊಡೆದು ಹಲವಾರು ಮೀಟರ್ ಎಳೆದಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯನ್ನು ಇನ್ನೂ ಬಂಧಿಸಬೇಕಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ