Driver suffers massive heart attack: ಸ್ಟೀರಿಂಗ್ ಮೇಲೆ ಪ್ರಾಣಬಿಟ್ಟ ಕೆಎಸ್​ಆರ್​ಟಿಸಿ ಬಸ್ ಡ್ರೈವರ್, ಪ್ರಯಾಣಿಕರ ಪ್ರಾಣವುಳಿಸಿದ ಕಂಡಕ್ಟರ್!

|

Updated on: May 31, 2023 | 1:12 PM

ಪ್ರಯಾಣಿಕರ ಪ್ರಾಣ ಉಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಆದರೆ, ಸ್ಟೀರಿಂಗ್ ಮೇಲೆ ಪ್ರಾಣ ಬಿಟ್ಟ ಮರುಗಪ್ಪಗೆ ವಿಧಿಯಿಂದ ಅನ್ಯಾಯವಾಗಿದ್ದು ದುಃಖ ಮತ್ತು ಖೇದಕರ!

ವಿಜಯಪುರ: ನಿನ್ನೆ ರಾತ್ರಿ ಜಿಲ್ಲೆಯ ಸಿಂದಗಿಯಲ್ಲಿ ಜರುಗಿದ ಘಟನೆ ಬಹಳ ದುರದೃಷ್ಟಕರ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಬಸ್ಸನ್ನು ಚಾಲಕ ಮುರಗಪ್ಪ ಅಥಣಿ (Murugappa Athani) ಓಡಿಸುತ್ತಿದ್ದರು ಮತ್ತು ಬಸ್ ಸಿಂದಗಿ ಪಟ್ಟಣದಿಂದ ಹೊರವಲಯಕ್ಕೆ ಬಂದಾಗ ಮುರುಗಪ್ಪಗೆ ಹಠಾತ್ ಹೃದಯಾಘಾತವಾಗಿದೆ. ಅಟ್ಯಾಕ್ ಎಷ್ಟು ತೀವ್ರವಾಗಿತ್ತೆಂದರೆ, ಚಾಲಕ ಸ್ಟೀರಿಂಗ್ (wheel) ಮೇಲೆ ಪ್ರಾಣ ಬಿಟ್ಟಿದ್ದಾರೆ. ಬಸ್ ಓಲಾಡುತ್ತಿದ್ದುದನ್ನು ಕಂಡು ಕಂಡಕ್ಟರ್ (conductor) ಕ್ಯಾಬಿನ್ ಗೆ ಹೋಗಿ ನೋಡಿದಾಗ ವಿಷಯ ಅರ್ಥವಾಗಿದೆ. ಕೂಡಲೇ ಅವರು ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿರುವರಾದರೂ ಅದು ಸಾಧ್ಯವಾಗದೆ ರಸ್ತೆಬದಿಯಲ್ಲಿದ್ದ ಪೆಟ್ರೋಲ್ ಬಂಕ್ ಒಂದಕ್ಕೆ ನುಗ್ಗಿಸಿ ವಾಹನವನ್ನು ನಿಲುಗಡೆ ಸ್ಥಿತಿಗೆ ತಂದಿದ್ದಾರೆ. ಪ್ರಯಾಣಿಕರ ಪ್ರಾಣ ಉಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಆದರೆ, ಸ್ಟೀರಿಂಗ್ ಮೇಲೆ ಪ್ರಾಣ ಬಿಟ್ಟ ಮರುಗಪ್ಪಗೆ ವಿಧಿಯಿಂದ ಅನ್ಯಾಯವಾಗಿದ್ದು ದುಃಖ ಮತ್ತು ಖೇದಕರ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ