DK Shivakumar: ಚುನಾವಣೆ ಮತ್ತು ಸಂಪುಟ ರಚನೆ ಗಡಿಬಿಡಿಯಲ್ಲಿ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ರನ್ನು ಭೇಟಿಯಾಗಲಾಗಿರಲಿಲ್ಲ: ಡಿಕೆ ಶಿವಕುಮಾರ್
ಸವದಿ ಮತ್ತು ಶೆಟ್ಟರ್ ಅವರಲ್ಲದೆ, ಬೇರೆ ಕೆಲ ನಾಯಕರು ಬಿಜೆಪಿಯಲ್ಲಿ ತಮ್ಮ ಸ್ಥಾನಮಾನಗಳನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಬೆಳಗಾವಿ: ಬಿಜಪಿಯಿಂದ ಕಾಂಗ್ರೆಸ್ ಪಕ್ಷ ಸೇರಿದ ಲಕ್ಷ್ಮಣ ಸವದಿ (Laxman Savadi) ಮತ್ತು ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ತಾನು ಭೇಟಿಯಾಗುತ್ತಿರುವ ಉದ್ದೇಶವನ್ನು ನಗರದ ಮಾಧ್ಯಮ ಪ್ರತಿನಿಧಿಗಳ ಮುಂದೆ ಉಪ ಮುಖ್ಯಮಂತ್ರಿ (DK Shivakumar) ಬಿಡಿಸಿ ಹೇಳಿದರು. ಸವದಿ ಮತ್ತು ಶೆಟ್ಟರ್ ಅವರಲ್ಲದೆ, ಬೇರೆ ಕೆಲ ನಾಯಕರು ಬಿಜೆಪಿಯಲ್ಲಿ ತಮ್ಮ ಸ್ಥಾನಮಾನಗಳನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಚುನಾವಣೆಯಲ್ಲಿ ಕೆಲವರು ಗೆದ್ದಿದ್ದಾರೆ ಕೆಲವರು ಸೋತಿದ್ದಾರೆ. ಚುನಾವಣಾ ಪ್ರಚಾರದ ಓಡಾಟದ ಬಳಿಕ ಸಂಪುಟ ರಚನೆಯಲ್ಲಿ ಬ್ಯೂಸಿಯಾಗಿದ್ದರಿಂದ ಅವರೊಂದಿಗೆಲ್ಲ ಮಾತಾಡುವುದು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರನ್ನು ಈಗ ಭೇಟಿಯಾಗುತ್ತಿರುವುದಾಗಿ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 31, 2023 11:34 AM
Latest Videos