AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Laxman Savadi: ಸಚಿವ ಇಲ್ಲವೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ಮೇಲೆ ವಲಸಿಗ ಶಾಸಕ ಲಕ್ಷ್ಮಣ ಸವದಿ ಕಣ್ಣಿಟ್ಟಿರುವುದು ಸೋಜಿಗ ಹುಟ್ಟಿಸುತ್ತದೆ!

Laxman Savadi: ಸಚಿವ ಇಲ್ಲವೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ಮೇಲೆ ವಲಸಿಗ ಶಾಸಕ ಲಕ್ಷ್ಮಣ ಸವದಿ ಕಣ್ಣಿಟ್ಟಿರುವುದು ಸೋಜಿಗ ಹುಟ್ಟಿಸುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 31, 2023 | 10:28 AM

ಶಿವಕುಮಾರ್ ಅವರದ್ದು ಸೌಜನ್ಯದ ಭೇಟಿ ಅಂತ ಹೇಳುವ ಸವದಿ ಕೆಪಿಸಿಸಿ ಕಾರ್ಯಾಧ್ಯಕ್ಷನ ಮೇಲೆ ಕಣ್ಣಿಟ್ಟಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.

ಬೆಳಗಾವಿ: ಮಂತ್ರಿಮಂಡಲ ರಚನೆ ಸಂದರ್ಭದಲ್ಲಿ ಅಥಣಿಯ ವಲಸಿಗ ಶಾಸಕ ಲಕ್ಷ್ಮಣ ಸವದಿಯವರಿಗೆ (Laxman Savadi) ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಅವರಿಗೂ ಸೇರಿದಂತೆ ಬಹಳಷ್ಟು ಜನರಿಗಿತ್ತು. ಆದರೆ, ಅವರು ಎಣಿಸಿದಂತೆ ನಡೆಯಲಿಲ್ಲ ಅದು ಬೇರೆ ಸಂಗತಿ. ಅಸಲಿಗೆ ಸವದಿಯವರು ಮಂತ್ರಿ ಸ್ಥಾನದ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪು ಮತ್ತು ಅಸಹಜ. ಕಾಂಗ್ರೆಸ್ ಪಕ್ಷಕ್ಕೆ (Congress party) ದಶಕಗಳಿಂದ ದುಡಿಯುತ್ತಿರುವ ಮತ್ತು ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾದರೂ ಒಮ್ಮೆಯೂ ಮಂತ್ರಿ ಸ್ಥಾನ ಪಡೆಯದ ಧುರೀಣರ ಸಂಖ್ಯೆ ಚಿಕ್ಕದಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಅಂತ ಸವದಿ ಮುನಿಸಿಕೊಂಡಿದ್ದರೆ, ಅವರನ್ನು ಸಮಾಧಾನ ಪಡಿಸಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೋಗಿದ್ದರೆ ಈ ಬೆಳವಣಿಗೆ ಹೊಸ ಸರ್ಕಾರಕ್ಕೆ ಸರಿಯಲ್ಲ. ಶಿವಕುಮಾರ್ ಅವರದ್ದು ಸೌಜನ್ಯದ ಭೇಟಿ ಅಂತ ಹೇಳುವ ಸವದಿ ಕೆಪಿಸಿಸಿ ಕಾರ್ಯಾಧ್ಯಕ್ಷನ ಮೇಲೆ ಕಣ್ಣಿಟ್ಟಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ