ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಡ್ರೋನ್ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಬಿಗ್ ಬಾಸ್ ಮೂಲಕ ಪಾಸಿಟಿವ್ ಪ್ರತಿಕ್ರಿಯೆ ಪಡೆದ ಡ್ರೋನ್ ಪ್ರತಾಪ್ ಅವರು ಈಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಭಾಗಿ ಆಗಿದ್ದಾರೆ. ಈಗ ಅವರು ತಾಯಿಗೆ ಕಾರೊಂದನ್ನು ಗಿಫ್ಟ್ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಅವರನ್ನು ಎಲ್ಲರೂ ಹೊಗಳುವ ಕೆಲಸ ಮಾಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡದಲ್ಲಿ ಭಾಗಿ ಆಗಿದ್ದ ಡ್ರೋನ್ ಪ್ರತಾಪ್ (Drone Prathap) ರನ್ನರ್ ಅಪ್ ಆದರು. ತಮಗೆ ಬಂದಿದ್ದ ಬೈಕ್ನ ಅವರು ದಾನ ಮಾಡಿದರು. ಈಗ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನ ಭಾಗವಾಗಿದ್ದಾರೆ. ಈ ಸೀಸನ್ ನಡೆಯುವಾಗ ತಾಯಿಗೆ ಸರ್ಪ್ರೈಸ್ ನೀಡಿದ್ದಾರೆ. ಡ್ರೋನ್ ಪ್ರತಾಪ್ ಅವರು ತಮ್ಮ ತಾಯಿಗೆ ಹುಂಡೈ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವೇಳೆ ಅವರ ತಾಯಿ ಅತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.