ಪ್ರತಾಪ್​ನ ಕ್ಯಾಪ್ಟನ್ಸಿ ರೇಸ್​ನಿಂದ ಹೊರಗಿಟ್ಟ ಮನೆ ಮಂದಿ; ಮತ್ತೆ ಅಸಮಾಧಾನದ ಹೊಗೆ

|

Updated on: Dec 29, 2023 | 8:47 AM

ತನಿಷಾ, ಸಂಗೀತಾ ಹಾಗೂ ಪ್ರತಾಪ್ ಕ್ಯಾಪ್ಟನ್ಸಿ ರೇಸ್​ನಲ್ಲಿದ್ದರು. ಈಗ ಈ ಮೂವರಲ್ಲಿ ಒಬ್ಬರನ್ನು ಹೊರಗೆ ಇಡಬೇಕಾಗಿ ಬಂದಿದೆ. ಈ ವೇಳೆ ಮನೆ ಮಂದಿ ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಕೊನೆಯ ಹಂತ ತಲುಪಿದೆ. ಈಗ ಕ್ಯಾಪ್ಟನ್ ಆಗೋದು ಬಹಳ ಮುಖ್ಯ ಆಗುತ್ತದೆ. ಈ ಅವಕಾಶವನ್ನು ಪ್ರತಾಪ್ ಮಿಸ್ ಮಾಡಿಕೊಂಡಿದ್ದಾರೆ. ಈ ವಾರ ಆಗಮಿಸಿದ ಕುಟುಂಬದವರಿಗೆ ಯಾರು ಕ್ಯಾಪ್ಟನ್ ಆಗಬೇಕು ಎಂಬುದನ್ನು ಹೇಳುವ ಅವಕಾಶ ನೀಡಲಾಯಿತು. ಕುಟುಂಬದವರು ಹೇಳಿದವರ ಅನುಸಾರ, ತನಿಷಾ, ಸಂಗೀತಾ ಹಾಗೂ ಪ್ರತಾಪ್ (Prathap) ಅವರನ್ನು ಆಯ್ಕೆ ಮಾಡಲಾಯಿತು. ಈಗ ಈ ಮೂವರಲ್ಲಿ ಒಬ್ಬರನ್ನು ಹೊರಗೆ ಇಡಬೇಕಾಗಿ ಬಂದಿದೆ. ಈ ವೇಳೆ ಮನೆ ಮಂದಿ ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಾಪ್ ಅಸಮಧಾನಗೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Dec 29, 2023 08:46 AM