AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್​​ ಚಟಕ್ಕೆ ದಾಸನಾದ ಪುತ್ರ: ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ

ಡ್ರಗ್ಸ್​​ ಚಟಕ್ಕೆ ದಾಸನಾದ ಪುತ್ರ: ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ

ವಿವೇಕ ಬಿರಾದಾರ
|

Updated on: Nov 10, 2024 | 12:26 PM

Share

ಮಗನ ಡ್ರಗ್ಸ್ ಮತ್ತು ಗಾಂಜಾ ಚಟಕ್ಕೆ ರೋಸಿ ಹೋದ ತಾಯಿ "ದಯವಿಟ್ಟು ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ" ಎಂದು ಕಣ್ಣೀರು ಹಾಕಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ.

ಮಗನ ಡ್ರಗ್ಸ್ (Drugs) ಮತ್ತು ಗಾಂಜಾ (Ganja) ಚಟಕ್ಕೆ ರೋಸಿ ಹೋದ ತಾಯಿ “ದಯವಿಟ್ಟು ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ” ಎಂದು ಕಣ್ಣೀರು ಹಾಕಿರುವ ಘಟನೆ ತುಮಕೂರು (Tumakur) ಜಿಲ್ಲೆಯ ತುರುವೇಕೆರೆಯಲ್ಲಿ (Turuvekere) ನಡೆದಿದೆ. ತುರುವೇಕೆರೆಯ ರೇಣುಕಮ್ಮ ಎಂಬವರು ಪುತ್ರ ಅಭಿ ಗಾಂಜಾ ಮತ್ತು ಡ್ರಗ್ಸ್​ ವ್ಯಸನಿಯಾಗಿದ್ದಾನೆ.

“ಹೆಣ್ಣು ಮಕ್ಕಳನ್ನು ಕೆಣಕಿ ಒದೆ ತಿನ್ನುತ್ತಾನೆ. ಜನರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ. ನನ್ನ ಮಗ ಹೀಗೆ ಆಗಲು ಗಾಂಜಾ ಮತ್ತು ಡ್ರಗ್ಸ್​ ವ್ಯಸನವೇ ಕಾರಣ. ಗಾಂಜಾ ಸೇವನೆಯಿಂದ ನನ್ನ ಮಗ ಹಾಳಾಗಿದ್ದಾನೆ. ತುರುವೇಕೆರೆ ಪೊಲೀಸರು ಗಾಂಜಾ ಹಾವಳಿ ತಡೆಯಬೇಕು. ಈತನ ಕಾಟಕ್ಕೆ ನಾನು ರೋಸಿ ಹೋಗಿದ್ದೇನೆ. ಹೀಗಾಗಿ ನನ್ನ ಮಗನನ್ನು ಜೈಲಿಗೆ ಹಾಕಿ ಅಥವಾ ವಿಷ ಹಾಕಿ ಸಾಯಿಸಲು ಅನುಮತಿ ನೀಡಿ” ಎಂದು ನೊಂದ ತಾಯಿ ರೇಣುಕಮ್ಮ ಕಣ್ಣೀರು ಹಾಕಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.