[lazy-load-videos-and-sticky-control id=”Mo2U_GHjAlQ”]
ಬೆಂಗಳೂರು: ಕುಡಿದು ಕಾರು ಚಲಾಯಿಸಿದರ ಪರಿಣಾಮದಿಂದಾಗಿ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಿಚ್ಮಂಡ್ ವೃತ್ತದ ಬಳಿಯ ಸಿಗ್ನಲ್ನಲ್ಲಿ ನಡೆದಿದೆ.
ಮೃತ ಕಿರಣ್ ವಿಮೆ ಕಂಪನಿ ಉದ್ಯೋಗಿ ರೋಹಿತ್ ಕೇಡಿಯಾ ಮದ್ಯ ಸೇವಿಸಿ ವಾಹನ ಚಲಾಯಿಸಿ ಸರಣಿ ಅಪಘಾತ ಮಾಡಿದ ವ್ಯಕ್ತಿಯಾಗಿದ್ದು, ಆರೋಪಿಯ ವಿರುದ್ದ 304 ಅಡಿ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕಿರಣ್(23) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದು, ಮೃತ ಕಿರಣ್ ಇನ್ಶುರೆನ್ಸ್ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.
ಡ್ರಗ್ಸ್ ಸೇವನೆ ಬಗ್ಗೆಯೂ ಪೊಲೀಸರ ತನಿಖೆ
ರೋಹಿತ್ ಕೇಡಿಯಾ ಅಪಘಾತದ ವೇಳೆ ಮದ್ಯಪಾನ ಮಾಡಿರುವುದು ಕಂಡು ಬಂದಿದ್ದು, ನಿನ್ನೆ ರಾತ್ರಿ ರಿಚ್ಮಂಡ್ ವೃತ್ತದ ಸಮೀಪ ಸಿಗ್ನಲ್ನಲ್ಲಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ.
ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಘಟನೆ ನಡೆದಿದ್ದು, ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕುಡಿದು ವಾಹನ ಚಾಲನೆಯ ವೇಳೆ ಆರೋಪಿ ಡ್ರಗ್ಸ್ ಸೇವನೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.