ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ ಮಿಸ್
ಬೆಂಗಳೂರಿನ ಸಹಕಾರ ನಗರದಲ್ಲಿರುವ ಮಾಲ್ ಆಫ್ ಏಷ್ಯಾದ ಗೇಟ್ ನಂ.3ರಲ್ಲಿ ನಿನ್ನೆ ರಾತ್ರಿ ಕಾರೊಂದು ಫುಟ್ಪಾತ್ಗೆ ನುಗ್ಗಿದ ಪರಿಣಾಮ 7 ಮಂದಿ ಗಾಯಗೊಂಡಿದ್ದಾರೆ. ಚಾಲಕ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದ್ದು, ಅಪಘಾತ ವೇಳೆ ಬಾಲಕಿಯೋರ್ವಳು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾಳೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೇವನಹಳ್ಳಿ, ಜನವರಿ 01: ಹೊಸ ವರ್ಷದ ಹಿನ್ನಲೆ ಕಂಠ ಪೂರ್ತಿ ಕುಡಿದ ಕಾರು ಚಾಲಕನೊಬ್ಬ ಮದ್ಯದ ಅಮಲಿನಲ್ಲಿ ಪಾದಚಾರಿಗಳ ಮೇಲೆ ಕಾರು ಹರಿಸಿರುವ ಘಟನೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ಮಾಲ್ ಆಫ್ ಏಷ್ಯಾದ ಗೇಟ್ ನಂ.3ರಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ವೇಳೆ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಬಾಲಕಿ ಬಚಾವ್ ಆಗಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಚಾಲಕ ಮದ್ಯದಮಲಿನಲ್ಲಿದ್ದ ಹಿನ್ನೆಲೆ ಮಾಲ್ನಿಂದ ಹೊರಗೆ ಬರುವಾಗ ಕಾರು ನಿಯಂತ್ರಣ ತಪ್ಪಿದೆ. ಹೀಗಾಗಿ ಫುಟ್ಪಾತ್ಗೆ ಕಾರು ನುಗ್ಗಿದ ಪರಿಣಾಮ 7 ಜನರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಕಾರು ಚಾಲಕ ಸುನೀಲ್ ಕುಮಾರ್ ಸಿಂಗ್ ಮತ್ತು ಮಾಲ್ ಆಫ್ ಏಷ್ಯಾ ಆಡಳಿತ ಮಂಡಳಿ ವಿರುದ್ಧ ಸಂಜಯ್ನಗರ ಸಂಚಾರಿ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.