AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂ ಇಯರ್​​​ ಸಂಭ್ರಮ ಮಧ್ಯೆ ಕಿರಿಕ್: ಗೆಳೆಯನಿಗೆ ಹೊಡೆದ ಯುವತಿ, ನಡುರೋಡಲ್ಲೇ ಜೋಡಿ ಹೈಡ್ರಾಮಾ, ಲಾಠಿ ಚಾರ್ಜ್

New Year 2026: ಬೆಂಗಳೂರು ಸೇರಿ ರಾಜ್ಯದೆಲ್ಲಡೆ ಹೊಸ ವರ್ಷ 2026 ಅನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವೆಡೆ ಸಂಭ್ರಮಾಚರಣೆ ಜೋರಾಗಿತ್ತು. ಈ ಹೊಸ ವರ್ಷದ ಸಂಭ್ರಮಾಚರಣೆ ನಡುವೆಯೇ ನಗರದಲ್ಲಿ ಕೆಲ ಕಿರಿಕ್​​ ನಡೆದಿವೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ನ್ಯೂ ಇಯರ್​​​ ಸಂಭ್ರಮ ಮಧ್ಯೆ ಕಿರಿಕ್: ಗೆಳೆಯನಿಗೆ ಹೊಡೆದ ಯುವತಿ, ನಡುರೋಡಲ್ಲೇ ಜೋಡಿ ಹೈಡ್ರಾಮಾ, ಲಾಠಿ ಚಾರ್ಜ್
New Year 2026
ಗಂಗಾಧರ​ ಬ. ಸಾಬೋಜಿ
|

Updated on: Jan 01, 2026 | 2:24 AM

Share

ಬೆಂಗಳೂರು, ಜನವರಿ 01: 2025ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ 2026ನ್ನು (New Year) ಎಲ್ಲರೂ ವೆಲ್​ಕಂ ಮಾಡಿದರು. ರಾಜ್ಯದ ಜನರು ಹೊಸ ವರ್ಷವನ್ನು ಸಂಭ್ರಮ ಸಡಗರದಿಂದ ಬರಮಾಡಿಕೊಂಡಿದ್ದಾರೆ. ಬೆಂಗಳೂರಿನ (bangaluru) ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಹಲವೆಡೆ ಸೆಲೆಬ್ರೇಷನ್ ಜೋರಾಗಿತ್ತು. ಕಿಕ್ಕೇರಿಸಿಕೊಂಡು ಎಲ್ಲರೂ ಕುಣಿದು ಕುಪ್ಪಳಿಸಿದ್ದು, ಹೊಸ ವರ್ಷವನ್ನ ಮಸ್ತ್ ಎಂಜಾಯ್ ಮಾಡಿದರು. ಸಂಭ್ರಮಾಚರಣೆ ನಡುವೆಯೇ ಕೆಲ ಕಿರಿಕ್​ ಕೂಡ ನಡೆದಿದ್ದು, ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಂತೆ ಮನೆ ದಾರಿ ಹಿಡಿದರು.

ಕುಡಿದ ಮತ್ತಿನಲ್ಲಿ ಗೆಳೆಯನಿಗೆ ಹಲ್ಲೆ ಮಾಡಿದ ಗೆಳತಿ

ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಓಪೇರಾ ರಸ್ತೆಯಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಈ ವೇಳೆ ಸಂಭ್ರಮಾಚರಣೆ ನಡುವೆಯೇ ಹಲವು ಕಿರಿಕ್ ನಡೆದಿವೆ. ಒಪೇರಾ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಗೆಳೆಯನ ಮೇಲೆ ಯುವತಿ ಹಲ್ಲೆ ಮಾಡಿದ್ದಾಳೆ. ನ್ಯೂಇಯರ್ ಆಚರಣೆಗೆ ಆಗಮಿಸಿದ್ದ ಜೋಡಿ ನಡುರೋಡಲ್ಲೇ ಹೈಡ್ರಾಮಾ ಕ್ರಿಯೇಟ್ ಮಾಡಿದೆ. ನಶೆಯಲ್ಲಿದ್ದ ಜೋಡಿಯನ್ನು ಸಮಾಧಾನಪಡಿಸಲು ಪೊಲೀಸು ಹರಸಹಾಸ ಪಡುವಂತಾಯ್ತು. ಕುಡಿದು ಟೈಟಾದ ಪ್ರೇಯಸಿಯನ್ನ ಮಗುವಿನ‌ ರೀತಿ ಪ್ರಿಯಕರ ಹೊತ್ತೊಯ್ದಿದ್ದಾನೆ.

ಇದನ್ನೂ ಓದಿ: ನ್ಯೂ ಇಯರ್​ ಕಿಕ್​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​ ​

ಕೋರಮಂಗಲದ ಟೋಕಾ ಪಬ್​ನಲ್ಲಿ ಯುವಕರಿಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಓರ್ವ ಯುವಕನ ತಲೆಗೆ ಗಾಯವಾಗಿದೆ. ಗಾಯಗೊಂಡ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಆ್ಯಂಬುಲೆನ್ಸ್ ಹತ್ತಲು ಹಿಂದೇಟು ಹಾಕಿದ ಯುವಕನಿಗೆ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ.

ಬ್ರಿಗೇಡ್ ರಸ್ತೆಯಲ್ಲಿ ನಡು ರಸ್ತೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ನ್ಯೂ ಇಯರ್ ಖುಷಿಯಲ್ಲಿ ಯುವಕರು ನಡುರೋಡಲ್ಲೇ ಪಟಾಕಿ ಸಿಡಿಸಿದ್ದರು. ರಸ್ತೆಯಲ್ಲೇ ಪಟಾಕಿ ಹಚ್ಚಿದಕ್ಕೆ ಕುಡಿದು ಮತ್ತಿನಲ್ಲಿದ್ದ ಯುವಕರ ಗುಂಪಿಗೆ ಪೊಲೀಸರು ಲಾಠಿ ಬೀಸಿ ಕಿಕ್ ಇಳಿಸಿದರು. ಯುವಕರ ಗುಂಪು ಎದ್ನೋ ಬಿದ್ನೋ ಅಂತಾ ಓಡಿ ಹೋದರು.

ಇದನ್ನೂ ಓದಿ: New Year 2026: ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಯುವಸಮೂಹ

ಇನ್ನು ಖುದ್ದು ಜನರನ್ನ ಕಂಟ್ರೋಲ್ ಮಾಡಲು ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಫೀಲ್ಡಿಗಿಳಿದರು. ಯಾವುದೇ ತೊಂದರೆ ಇಲ್ಲದೆ ಸೇಫ್ಟಿ ನೀಡಿದ ಕಮಿಷನರ್​ಗೆ ಕೆಲ ಜನರು ಹೂವಿನ ಗುಚ್ಚ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ