ಎಂಥ ಕಾಲ ನೋಡ್ರಪ್ಪಾ …ಬುದ್ಧಿ ಹೇಳಿದ್ದಕ್ಕೆ ಕುಚಿಕು ಗೆಳೆಯನನ್ನ ಹತ್ಯೆಗೈದ ಸ್ನೇಹಿತ

Updated on: Nov 02, 2025 | 4:51 PM

ಸಂಬಂಧಿಗಳಿಗಿಂತ ಸ್ನೇಹಿತರೇ ಕಷ್ಟ ಕಾಲದಲ್ಲಿ ಇರುತ್ತಾರೆ ಎನ್ನುವ ಮಾತಿದೆ. ಗೆಳೆತನ ಅಂದ್ರೆನೇ ಹಾಗೇ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಸ್ನೇಹಿತ ಏನಾದ್ರೂ ತಪ್ಪು ಮಾಡುತ್ತಿದ್ದರೆ ಈ ರೀತಿ ಮಾಡಡಬೇಡ ಅಂತೆಲ್ಲ ಸಲಹೆ ಸೂಚನೆ ಕೊಡುವುದು ಉಂಟು. ಆದ್ರೆ, ಇಲ್ಲೋರ್ವ ಗೆಳೆಯ ಕುಡಿಯಬೇಡ ಎಂದಿದ್ದಕ್ಕೆ ದುರಂತ ಸಾವುಕಂಡಿದ್ದಾನೆ. ಹೌದು... ರಮೇಶ್​ ಎನ್ನುವಾತ ಕಲ್ಲಿನಿಂದ ಹೊಡೆದು ತನ್ನ ಗೆಳೆಯ ಗಿರೀಶ್​ ((44)) ಎನ್ನುವಾತನನ್ನು ​​ ಹತ್ಯೆಗೈದಿದ್ದಾನೆ.

ಹಾಸನ, (ನವೆಂಬರ್ 02): ಸಂಬಂಧಿಗಳಿಗಿಂತ ಸ್ನೇಹಿತರೇ ಕಷ್ಟ ಕಾಲದಲ್ಲಿ ಇರುತ್ತಾರೆ ಎನ್ನುವ ಮಾತಿದೆ. ಗೆಳೆತನ ಅಂದ್ರೆನೇ ಹಾಗೇ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಸ್ನೇಹಿತ ಏನಾದ್ರೂ ತಪ್ಪು ಮಾಡುತ್ತಿದ್ದರೆ ಈ ರೀತಿ ಮಾಡಡಬೇಡ ಅಂತೆಲ್ಲ ಸಲಹೆ ಸೂಚನೆ ಕೊಡುವುದು ಉಂಟು. ಆದ್ರೆ, ಇಲ್ಲೋರ್ವ ಗೆಳೆಯ ಕುಡಿಯಬೇಡ ಎಂದಿದ್ದಕ್ಕೆ ದುರಂತ ಸಾವುಕಂಡಿದ್ದಾನೆ. ಹೌದು… ರಮೇಶ್​ ಎನ್ನುವಾತ ಕಲ್ಲಿನಿಂದ ಹೊಡೆದು ತನ್ನ ಗೆಳೆಯ ಗಿರೀಶ್​ ((44)) ಎನ್ನುವಾತನನ್ನು ​​ ಹತ್ಯೆಗೈದಿದ್ದಾನೆ.

ಕುಡಿಯೋದು ಬಿಡು ಎಂದು ಬುದ್ಧಿವಾದ ಹೇಳಿದ್ದಕ್ಕೆ ದುರುಳ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ರಾಂಪುರದಲ್ಲಿ ನಡೆದಿದೆ. ರಮೇಶ್​ ಮದ್ಯಸೇವಿಸಿ ಗಿರೀಶ್​ ಬಳಿ ಬಂದಿದ್ದ. ಆ ವೇಳೆ ರಮೇಶ್ ಕುಡಿಯಬೇಡ ಎಂದು ಗಿರೀಶ್​ ಗೆ ಬುದ್ಧಿ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ರಮೇಶ್, ಕಲ್ಲಿನಿಂದ ಗರೀಶ್​​ನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More