ಧ್ರುವಂತ್ ಎದುರು ಪೇಚಿಗೆ ಸಿಲುಕಿದ ರಕ್ಷಿತಾ ಶೆಟ್ಟಿ: ಉಳಿದವರಿಗೆ ಸಖತ್ ನಗು
ರಕ್ಷಿತಾ ಶೆಟ್ಟಿ ಸರಿಯಾಗಿ ಮೈಕ್ ಧರಿಸಿರಲಿಲ್ಲ. ಆದ್ದರಿಂದ ಎಲ್ಲರ ಬಳಿ ಹೋಗಿ ಕ್ಷಮೆ ಕೇಳುವಂತೆ ಅವರಿಗೆ ಕ್ಯಾಪ್ಟನ್ ರಘು ಆದೇಶಿಸಿದ್ದಾರೆ. ತಮ್ಮ ಬಳಿ ಕ್ಷಮೆ ಕೇಳಲು ಬಂದ ರಕ್ಷಿತಾ ಶೆಟ್ಟಿಯನ್ನು ಧ್ರುವಂತ್ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ನ.18ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಸ್ಪರ್ಧಿಗಳು ಬಿಗ್ ಬಾಸ್ (Bigg Boss Kannada Season 12) ಮನೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಶಿಕ್ಷೆ ಆಗುತ್ತಿದೆ. ಈ ವಾರ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ನಿಯಮ ಮುರಿದವರಿಗೆ ಶಿಕ್ಷೆ ನೀಡುವುದು ಕ್ಯಾಪ್ಟನ್ ರಘು ಅವರ ಕೆಲಸ. ರಕ್ಷಿತಾ ಶೆಟ್ಟಿ (Rakshita Shetty) ಅವರು ಸರಿಯಾಗಿ ಮೈಕ್ ಧರಿಸಿರಲಿಲ್ಲ. ಹಾಗಾಗಿ ಅವರು ಎಲ್ಲರ ಬಳಿ ಹೋಗಿ ಕ್ಷಮೆ ಕೇಳುಬೇಕು ಎಂದು ಕ್ಯಾಪ್ಟನ್ ರಘು ಆದೇಶಿಸಿದ್ದಾರೆ. ತಮ್ಮ ಬಳಿ ಕ್ಷಮೆ ಕೇಳಲು ಬಂದ ರಕ್ಷಿತಾ ಶೆಟ್ಟಿಯನ್ನು ಧ್ರುವಂತ್ ಅವರು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಅದನ್ನು ಕಂಡು ಇನ್ನುಳಿದವರಿಗೆ ಸಖತ್ ನಗು ಬಂದಿದೆ. ಇದರಿಂದ ಬೇಸರಗೊಂಡ ರಕ್ಷಿತಾ ಶೆಟ್ಟಿ ಅವರು ‘ಇನ್ನು ಯಾವತ್ತೂ ಮೈಕ್ ತಪ್ಪಾಗಿ ಹಾಕಿಕೊಳ್ಳಲ್ಲ’ ಎಂದು ನಿರ್ಧರಿಸಿದ್ದಾರೆ. ರಕ್ಷಿತಾ ಶೆಟ್ಟಿ ಅವರನ್ನು ಕಂಡರೆ ಧ್ರುವಂತ್ (Druvanth) ಅವರಿಗೆ ಅಸಮಾಧಾನ ಇದೆ. ಅದನ್ನು ಅವರು ಈಗಾಗಲೇ ಅನೇಕ ಬಾರಿ ಹೇಳಿಕೊಂಡಿದ್ದುಂಟು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
