Duleep Trophy 2024: 181 ರನ್ ಸಿಡಿಸಿ ಕ್ರಿಕೆಟ್ ದೇವರ 33 ವರ್ಷಗಳ ಹಳೆಯ ದಾಖಲೆ ಮುರಿದ ಮುಶೀರ್ ಖಾನ್

|

Updated on: Sep 06, 2024 | 6:23 PM

Musheer Khan: ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ಮುಶೀರ್, ದ್ವಿಶತಕ ಗಳಿಸಲು ಸಾಧ್ಯವಾಗದಿದ್ದರೂ, ಅವರು 181 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಸಚಿನ್ ತೆಂಡೂಲ್ಕರ್ ಅವರ 33 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ತಮ್ಮ ಇನ್ನಿಂಗ್ಸ್​ನಲ್ಲಿ 373 ಎಸೆತಗಳನ್ನು ಎದುರಿಸಿದ ಮುಶೀರ್, ತಮ್ಮ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಹೊಡೆದರು.

ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಆರಂಭವಾಗಿದ್ದು, ಇದರಲ್ಲಿ 4 ತಂಡಗಳು ಭಾಗವಹಿಸುತ್ತಿವೆ. ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ-ಎ ಮತ್ತು ಭಾರತ-ಬಿ ನಡುವೆ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ ಬಿ ತಂಡವನ್ನು ಪ್ರತಿನಿಧಿಸುತ್ತಿರುವ 19 ವರ್ಷದ ಮುಶೀರ್ ಖಾನ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು 33 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಪುಡಿಗಟ್ಟಿದ್ದಾರೆ.

ಪಂದ್ಯಾವಳಿಯ ಮೊದಲ ದಿನದಾಟದಂತ್ಯಕ್ಕೆ 227 ಎಸೆತಗಳಲ್ಲಿ ಅಜೇಯ 105 ರನ್ ಬಾರಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮುಶೀರ್, ಎರಡನೇ ದಿನವೂ ತಮ್ಮ ಲಯವನ್ನು ಮುಂದುವರೆಸಿ 181 ರನ್​ಗಳ ದಾಖಲೆಯ ಇನ್ನಿಂಗ್ಸ್ ಆಡಿದರು. ಇದಲ್ಲದೆ ನವದೀಪ್ ಸೈನಿ ಅವರೊಂದಿಗೆ 8 ನೇ ವಿಕೆಟ್​ಗೆ 204 ರನ್ಗಳ ಅದ್ಭುತ ಜೊತೆಯಾಟವನ್ನು ಮಾಡಿದರು. ಆದರೆ ಚೊಚ್ಚಲ ಪಂದ್ಯದಲ್ಲಿಯೇ ದ್ವಿಶತಕ ಬಾರಿಸುವ ಅವಕಾಶ ಹೊಂದಿದ್ದ ಮುಶೀರ್ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಔಟಾದರು. ಆದಾಗ್ಯೂ ಮುಶೀರ್ ಅವರ ಈ ಇನ್ನಿಂಗ್ಸ್ ಐತಿಹಾಸಿಕವಾಗಿತ್ತು.

ಚೊಚ್ಚಲ ಪಂದ್ಯದಲ್ಲಿ 181ರನ್

ಮೇಲೆ ಹೇಳಿದಂತೆ ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ಮುಶೀರ್, ದ್ವಿಶತಕ ಗಳಿಸಲು ಸಾಧ್ಯವಾಗದಿದ್ದರೂ, ಅವರು 181 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಸಚಿನ್ ತೆಂಡೂಲ್ಕರ್ ಅವರ 33 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ತಮ್ಮ ಇನ್ನಿಂಗ್ಸ್​ನಲ್ಲಿ 373 ಎಸೆತಗಳನ್ನು ಎದುರಿಸಿದ ಮುಶೀರ್, ತಮ್ಮ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಹೊಡೆದರು.

ಸಚಿನ್ ದಾಖಲೆ ಉಡೀಸ್

ಇದರೊಂದಿಗೆ ದುಲೀಪ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಅದರಲ್ಲೂ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನೊಬ್ಬ ಕಲೆಹಾಕಿದ ಮೂರನೇ ಅತ್ಯಧಿಕ ಸ್ಕೋರ್ ಎಂಬ ದಾಖಲೆಯನ್ನು ಮುಶೀರ್ ನಿರ್ಮಿಸಿದರು. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಅವರು ಜನವರಿ 1991 ರಲ್ಲಿ ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ 159 ರನ್ ಸಿಡಿಸಿದ್ದರು. ಇದೀಗ ಮುಶೀರ್ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ.

Published on: Sep 06, 2024 06:13 PM