4, 4, 4, 4, 4… ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್..! ವಿಡಿಯೋ ನೋಡಿ

|

Updated on: Sep 07, 2024 | 6:45 PM

Sarfaraz Khan: ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ ತಮ್ಮ 36 ಎಸೆತಗಳ ಅಲ್ಪ ಇನ್ನಿಂಗ್ಸ್‌ನಲ್ಲಿ 46 ರನ್ ಸಿಡಿಸಿದರು. ಇದೇ ವೇಳೆ ಸರ್ಫರಾಜ್, ಎದುರಾಳಿ ತಂಡದ ಆಕಾಶದೀಪ್ ಬೌಲ್ ಮಾಡಿದ ಒಂದೇ ಓವರ್‌ನಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು.

ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ತಂಡದ ಪರ ಆಡುತ್ತಿರುವ ಸರ್ಫರಾಜ್ ಖಾನ್, ಭಾರತ ಎ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಒಂದಂಕಿಗೆ ಸುಸ್ತಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ ತಮ್ಮ 36 ಎಸೆತಗಳ ಅಲ್ಪ ಇನ್ನಿಂಗ್ಸ್‌ನಲ್ಲಿ 46 ರನ್ ಸಿಡಿಸಿದರು. ಇದೇ ವೇಳೆ ಸರ್ಫರಾಜ್, ಎದುರಾಳಿ ತಂಡದ ಆಕಾಶದೀಪ್ ಬೌಲ್ ಮಾಡಿದ ಒಂದೇ ಓವರ್‌ನಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು. ಓವರ್​ನ ಮೊದಲ ಎಸೆತದಲ್ಲಿ ಸರ್ಫರಾಜ್​ಗೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ಓವರ್‌ನ ಮುಂದಿನ ಐದು ಎಸೆತಗಳಲ್ಲಿ ಒಂದರ ನಂತರ ಒಂದರಂತೆ ಐದು ಬೌಂಡರಿಗಳನ್ನು ಬಾರಿಸಿದರು.

ಸೊನ್ನೆಗೆ ಮುಶೀರ್ ಔಟ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಸುತ್ತಿನ ಪಂದ್ಯದ ಮೂರನೇ ದಿನ ಭಾರತ ಎ ಮೊದಲ ಇನಿಂಗ್ಸ್ 231 ರನ್‌ಗಳಿಗೆ ಆಲೌಟ್ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ 90 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ಬಿ ತಂಡ ಕೇವಲ 22 ರನ್‌ಗಳಿಗೆ ನಾಯಕ ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್ ಮತ್ತು ಮುಶೀರ್ ಖಾನ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮುಶೀರ್ 181 ರನ್‌ಗಳ ಅದ್ಭುತ ಇನ್ನಿಂಗ್ಸ್‌ನೊಂದಿಗೆ ತಂಡವನ್ನು 321 ರನ್‌ಗಳಿಗೆ ಕೊಂಡೊಯ್ದಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 6 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಔಟಾದರು.

46 ರನ್ ಬಾರಿಸಿ ಸರ್ಫರಾಜ್ ಔಟ್

ಸಹೋದರ ಮುಶೀರ್ ಔಟಾಗುತ್ತಿದ್ದಂತೆ, ಕ್ರೀಸ್‌ಗೆ ಕಾಲಿಟ್ಟ ಅಣ್ಣ ಸರ್ಫರಾಜ್ ಖಾನ್, ಆಕಾಶ್ ಎಸೆದ ಐದನೇ ಓವರ್‌ 5 ಎಸೆತಗಳಲ್ಲಿ ಸತತವಾಗಿ 5 ಬೌಂಡರಿ ಬಾರಿಸಿದರು. ಇದಾದ ಬಳಿಕ ಖಲೀಲ್ ಅಹ್ಮದ್ ವಿರುದ್ಧವೂ ಸರ್ಫರಾಜ್ ಸತತ ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಆದರೆ, ಅವರ ಆಕರ್ಷಕ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವರು 36 ಎಸೆತಗಳಲ್ಲಿ 46 ರನ್ ಗಳಿಸಿ ಅವೇಶ್ ಖಾನ್‌ಗೆ ಬಲಿಯಾದರು. ಸರ್ಫರಾಜ್ ಅವರ ಇನ್ನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Sat, 7 September 24

Follow us on