‘ಊಟ ಇಲ್ಲದೇ ಕ್ಯಾರೆಟ್ ತಿಂದ್ವಿ’: 24 ವರ್ಷಗಳ ಸ್ನೇಹ ಹಂಚಿಕೊಂಡ ವಿಜಿ-ಗಣಿ
‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ನಟಿಸಿರುವ ಗಣೇಶ್ ಹಾಗೂ ‘ಭೀಮ’ ಸಿನಿಮಾವನ್ನು ನಿರ್ದೇಶಿಸಿ ನಟಿಸಿರುವ ದುನಿಯಾ ವಿಜಯ್ ಅವರು ನೆನಪಿನ ಪುಟ ತೆರೆದಿದ್ದಾರೆ. ಕಳೆದ 24 ವರ್ಷಗಳ ಸ್ನೇಹದಲ್ಲಿ ಪರಸ್ಪರ ಜಗಳ ಮಾಡಿಕೊಂಡಿಲ್ಲ ಎಂದು ಗಣೇಶ್-ವಿಜಿ ಹೇಳಿದ್ದಾರೆ. ಆರಂಭದಲ್ಲಿ ಬಹಳ ಕಷ್ಟದ ದಿನಗಳನ್ನು ಕಂಡಿದ್ದ ಅವರು ಅದನ್ನೆಲ್ಲ ನೆನಪು ಮಾಡಿಕೊಂಡಿದ್ದಾರೆ.
ನಟ ಗಣೇಶ್ ಮತ್ತು ದುನಿಯಾ ವಿಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರೂ ಕೂಡ ಕಷ್ಟದ ದಿನಗಳನ್ನು ನೋಡಿಕೊಂಡು ಬಂದವರು. ‘ಮುಂಗಾರು ಮಳೆ’ ಚಿತ್ರದ ಮೂಲಕ ಗಣೇಶ್, ‘ದುನಿಯಾ’ ಸಿನಿಮಾ ಮೂಲಕ ವಿಜಿ ಅವರು ಸ್ಟಾರ್ಗಳಾದರು. ಈಗ ವಿಜಿ ನಟನೆಯ ‘ಭೀಮ’ ಬಿಡುಗಡೆ ಆಗುತ್ತಿದೆ. ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸಹ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ತಮ್ಮ ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ. ಊಟ ಇಲ್ಲದೇ ಇರುವಾಗ ಕ್ಯಾರೆಟ್ ಕದ್ದು ತಿಂದಿದ್ದನ್ನು ಗಣೇಶ್ ಮತ್ತು ವಿಜಯ್ ಕುಮಾರ್ ಅವರು ನೆನಪಿಸಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.