Ganesh Birthday: ಗೋಲ್ಡನ್ ಸ್ಟಾರ್ ಗಣೇಶ್​ ಅವರ ಬದುಕು ಬದಲಾಯಿಸಿತು ಆ ಒಂದು ಘಟನೆ

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು (ಜುಲೈ 2) ಜನ್ಮದಿನ. ಅವರು ನಡೆದಬಂದ ಹಾದಿ ಸಾಕಷ್ಟು ದುರ್ಗಮವಾಗಿತ್ತು. ಗಣೇಶ್ ಅವರು ತರಲೆ ಸ್ವಭಾವದವರಾಗಿದ್ದರು. ಅವರು ಪಿಯುಸಿ ಓದುವಾಗ ನಾಟಕದ ಬಗ್ಗೆ ಆಸಕ್ತಿ ಹೊಂದಿದ್ದರು. ಈ ಮೂಲಕ ಅವರು ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು.  

Ganesh Birthday: ಗೋಲ್ಡನ್ ಸ್ಟಾರ್ ಗಣೇಶ್​ ಅವರ ಬದುಕು ಬದಲಾಯಿಸಿತು ಆ ಒಂದು ಘಟನೆ
ಗಣೇಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 02, 2024 | 7:18 AM

ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು (ಜುಲೈ 2) ಜನ್ಮದಿನದ ಸಂಭ್ರಮ. ಅವರಿಗೆ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾ ತಂಡಗಳಿಂದ ಫ್ಯಾನ್ಸ್​ಗೆ ಉಡುಗೊರೆ ಸಿಗೋ ನಿರೀಕ್ಷೆ ಇದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆದು ಬಂದ ಹಾದಿ ತುಂಬಾನೇ ಕಠಿಣವಾಗಿತ್ತು. ಅವರು ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಗಣೇಶ್ ಅವರು 1978 ಜುಲೈ 2ರಂದು ಬೆಂಗಳೂರಿನ ನೆಲಮಂಗಲದ ಅಡಕಮಾರನ ಹಳ್ಳಿಯಲ್ಲಿ ಜನಿಸಿದರು. ಕಿಶನ್-ಸುಲೋಚನಾ ದಂಪತಿ​ಗೆ ಮೂವರು ಗಂಡು ಮಕ್ಕಳು. ಹಿರಿಯ ಮಗ ಗಣೇಶ್. ಗಣೇಶ್ ಅವರ ಸಹೋದರ ಮಹೇಶ್ ಚಿತ್ರರಂಗಕ್ಕೆ ಬರುವ ಪ್ರಯತ್ನ ಮಾಡಿದರು. ಆದರೆ, ಚಿತ್ರರಂಗ ಅವರ ಕೈ ಹಿಡಿಯಲೇ ಇಲ್ಲ.

ಗಣೇಶ್ ಅವರು ತರಲೆ ಸ್ವಭಾವದವರಾಗಿದ್ದರು. ಅವರು ಪಿಯುಸಿ ಓದುವಾಗ ನಾಟಕದ ಬಗ್ಗೆ ಆಸಕ್ತಿ ಹೊಂದಿದ್ದರು. ಈ ಮೂಲಕ ಅವರು ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಆ ಬಳಿಕ ಅವರು ರಂಗಭೂಮಿ ಜೊತೆ ನಂಟು ಬೆಳೆಸಿಕೊಂಡರು. ಇಲೆಕ್ಟ್ರಾನಿಕ್ ವಿಭಾಗದಲ್ಲಿ ಡಿಪ್ಲೋಮಾ ಮುಗಿಸಿದ್ದ ಗಣೇಶ್ ಅವರು ನಟನೆಯಲ್ಲಿ ಡಿಪ್ಲೋಮಾ ಮಾಡಿದರು. ಇದೇ ವೇಳೆ ಅವರು ಉದಯ ಟಿವಿಯಲ್ಲಿ ಪ್ರಸಾರ ಕಂಡ ‘ಕಾಮಿಡಿ ಟೈಮ್’ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು.

ಗಣೇಶ್ ಹೀರೋ ಆಗುವುದಕ್ಕೂ ಮೊದಲು ಪೋಷಕ ಪಾತ್ರಗಳಲ್ಲಿ ಗಮನ ಸೆಳೆದರು. 2002ರಲ್ಲಿ ರಿಲೀಸ್ ಆದ ‘ಟಪೋರಿ’ ಚಿತ್ರದಲ್ಲಿ ಒಂದು ಪಾತ್ರ ಮಾಡಿದರು. ಆ ಬಳಿಕ ಕೆಲ ವರ್ಷ ಅವರು ಪೋಷಕ ಪಾತ್ರಗಳಲ್ಲಿ ಮಿಂಚಿದರು. 2006ರಲ್ಲಿ ರಿಲೀಸ್ ಆದ ‘ಚೆಲ್ಲಾಟ’ ಚಿತ್ರದಲ್ಲಿ ಗಣೇಶ್ ಅವರು ಹೀರೋ ಆದರು. ಅದೇ ವರ್ಷ ರಿಲೀಸ್ ಆದ ‘ಮುಂಗಾರು ಮಳೆ’ ಚಿತ್ರ ಅವರ ಬದುಕು ಬದಲಿಸಿತು. ಸ್ಯಾಡ್ ಲವ್​ಸ್ಟೋರಿ ಜನರಿಗೆ ಸಖತ್ ಇಷ್ಟ ಆಯಿತು. ಜನರು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡಿದರು.

‘ಚೆಲುವಿನ ಚಿತ್ತಾರ’, ‘ಗಾಳಿಪಟ’, ‘ಗಾಳಿಪಟ 2’, ‘ಮುಂಗಾರು ಮಳೆ 2’, ‘ಚಮಕ್’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಗಣೇಶ್ ನೀಡಿದ್ದಾರೆ. ಸದ್ಯ ಅವರು ‘ಕೃಷ್ಣ ಪ್ರಣಯ ಸಖಿ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಹಾಡು ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆದಿದೆ.

ಇದನ್ನೂ ಓದಿ: ಈ ವರ್ಷ ಬರ್ತ್​ಡೇ ಆಚರಿಸಿಕೊಳ್ಳಲ್ಲ ಎಂದ ಗಣೇಶ್; ‘ಅವರು ನಿಮ್ಮಿಂದ ದೂರಾಗ್ತಾರೆ’ ಎಂದ ಫ್ಯಾನ್ಸ್

ಗಣೇಶ್ ಅವರು ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಹುಟ್ಟುಹಬ್ಬದ ದಿನ ಮನೆಯಲ್ಲಿ ಇರೋದಿಲ್ಲ ಎಂದು ಗಣೇಶ್ ಹೇಳಿದ್ದಾರೆ. ಹೀಗಾಗಿ, ಮನೆ ಬಳಿ ಬರದಂತೆ ಅವರು ಕೋರಿದ್ದಾರೆ. ಇದಕ್ಕೆ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.