Bheema: ‘ಭೀಮ’ ಸಿನಿಮಾದ ನಾಯಕಿ ಆಯ್ಕೆ ಆಗಿದ್ದು ಹೇಗೆ? ವಿಜಿ ಹೇಳಿದರು ಕತೆ

Bheema: ‘ಭೀಮ’ ಸಿನಿಮಾದ ನಾಯಕಿ ಆಯ್ಕೆ ಆಗಿದ್ದು ಹೇಗೆ? ವಿಜಿ ಹೇಳಿದರು ಕತೆ

ಮಂಜುನಾಥ ಸಿ.
|

Updated on: Aug 13, 2024 | 5:51 PM

Bheema: ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾದಲ್ಲಿ ಗಮನ ಸೆಳೆವ ಕಲಾವಿದರಲ್ಲಿ ನಾಯಕಿ ಅಶ್ವಿನಿ ಸಹ ಒಬ್ಬರು. ಅವರನ್ನು ಸಿನಿಮಾಕ್ಕೆ ನಾಯಕಿಯಾಗಿ ಹೇಗೆ ಆಯ್ಕೆ ಮಾಡಿಕೊಳ್ಳಲಾಯ್ತು ಎಂಬುದನ್ನು ದುನಿಯಾ ವಿಜಯ್ ಹೇಳಿದ್ದಾರೆ.

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಹಿಟ್ ಆಗಿರುವ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಂಡಿತ್ತು. ನಟ, ನಿರ್ದೇಶಕ ದುನಿಯಾ ವಿಜಯ್, ಸಿನಿಮಾದಲ್ಲಿ ನಟಿಸಿರುವ ಎಲ್ಲ ಕಲಾವಿದರಿಗೆ, ತಂತ್ರಜ್ಞರಿಗೆ ಧನ್ಯವಾದ ಹೇಳಿದರು. ಸಿನಿಮಾದಲ್ಲಿ ನಟನೆಯಿಂದ ಗಮನ ಸೆಳೆದಿರುವವರಲ್ಲಿ ಒಬ್ಬರಾದ ನಾಯಕಿ ಅಶ್ವಿನಿ ಬಗ್ಗೆ ಮಾತನಾಡುತ್ತಾ, ಈ ಸಿನಿಮಾಕ್ಕೆ ನಾಯಕಿಯಾಗಿ ಅವರು ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ಸಹ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ