‘ಭೀಮ’ ಫ್ಯಾನ್ ಶೋ ಕ್ಯಾನ್ಸಲ್; ಸಿಟ್ಟಾದ ಅಭಿಮಾನಿಗಳಿಂದ ಪುಂಡಾಟ
‘ಭೀಮ’ ಪಕ್ಕಾ ಮಾಸ್ ಸಿನಿಮಾ. ಈ ಚಿತ್ರ ಇಂದು ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಇದೆ. ಇದು ಕೂಡ ರೌಡಿಸಂ ಸಿನಿಮಾ. ಇದರಲ್ಲಿ ಅಗಾಧವಾಗಿ ರಕ್ತ, ಮಚ್ಚು-ಲಾಂಗ್, ಅವಾಚ್ಯ ಶಬ್ದಗಳ ಬಳಕೆ ಆಗಿದೆ. ಈ ಕಾರಣಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ.
ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಇಂದು (ಆಗಸ್ಟ್ 9) ರಿಲೀಸ್ ಆಗಿದೆ. ಈ ಚಿತ್ರವನ್ನು ದುನಿಯಾ ವಿಜಯ್ ಅವರು ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಭೀಮ’ ಸಿನಿಮಾಗೆ ಯಾವುದೇ ಫ್ಯಾನ್ ಶೋ ಕೊಟ್ಟಿಲ್ಲ. 9 ಗಂಟೆ ನಂತರವೇ ಶೋ ಆಯೋಜನೆ ಮಾಡಲಾಗಿದೆ. ಆದಾಗ್ಯೂ ಹೊಸಪೇಟೆಯಲ್ಲಿ ಮುಂಜಾನೆ ಶೋ ಇದೆ ಎಂದು ಘೋಷಿಸಲಾಯಿತು. ಆದರೆ, ಶೋ ಪ್ರಸಾರ ಕಂಡಿಲ್ಲ. ಇದರಿಂದ ಸಿಟ್ಟಾದ ಫ್ಯಾನ್ಸ್ ಗೇಟ್ಗಳನ್ನು ಮುರಿದು ಪುಂಡಾಟ ಮೆರೆದಿದ್ದಾರೆ. ಗೇಟ್ನ ಬೀಗವನ್ನು ಕಿತ್ತು ಹಾಕಿದ್ದಾರೆ. ಮುಂಜಾನೆಯೇ ‘ಭೀಮ’ ಶೋ ನೋಡಬೇಕು ಎಂದು ಬಂದ ಫ್ಯಾನ್ಸ್ಗೆ ಸಂಪೂರ್ಣ ನಿರಾಸೆಯಿಂದ ಹಿಂದಿರುಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.