‘ದಪ್ಪ ಆಗಿದೀನಿ, ಓಡಾಡೋಕೂ ಕಷ್ಟ ಆಗ್ತಿದೆ’; ಹೆಚ್ಚಿತು ದುನಿಯಾ ವಿಜಯ್ ದೇಹದ ತೂಕ

| Updated By: ರಾಜೇಶ್ ದುಗ್ಗುಮನೆ

Updated on: Jul 23, 2022 | 2:55 PM

ನಟ ದುನಿಯಾ ವಿಜಯ್ ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಜಿಮ್​ನಲ್ಲಿ ನಿತ್ಯ ವರ್ಕೌಟ್ ಮಾಡುತ್ತಾರೆ. ಆದರೆ, ಈಗ ಅವರು ದಪ್ಪ ಆಗಿದ್ದಾರೆ.

ನಟ ದುನಿಯಾ ವಿಜಯ್ (Duniya Vijay) ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಜಿಮ್​ನಲ್ಲಿ ನಿತ್ಯ ವರ್ಕೌಟ್ ಮಾಡುತ್ತಾರೆ. ಆದರೆ, ಈಗ ಅವರು ದಪ್ಪ ಆಗಿದ್ದಾರೆ. ದೇಹದ ತೂಕ ಹೆಚ್ಚಾಗಿದೆ. ಇದರಿಂದ ಅವರಿಗೆ ಓಡಾಡೋಕೂ ಸಮಸ್ಯೆ ಆಗುತ್ತಿದೆ. ಇದಕ್ಕೆ ಕಾರಣ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಸಿನಿಮಾ. ಈ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.