‘ಅವಳು ನನ್ನ ಮಗಳಾಗಿದ್ದಕ್ಕೆ ಸಾರ್ಥಕವಾಯ್ತು’; ರಿತನ್ಯಾ ಬಗ್ಗೆ ದುನಿಯಾ ವಿಜಯ್ ಮಾತು
Duniya Vijay Daughter: ದುನಿಯಾ ವಿಜಯ್ ಅವರ ಮಗಳು ರಿತನ್ಯಾ ಅವರು ‘ಲ್ಯಾಂಡ್ ಲಾರ್ಡ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲೂ ಅವರು ದುನಿಯಾ ವಿಜಯ್ ಮಗಳಾಗಿಯೇ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ದುನಿಯಾ ವಿಜಯ್ ಈ ಬಗ್ಗೆ ಮಾತನಾಡಿದ್ದಾರೆ.
ದುನಿಯಾ ವಿಜಯ್ ಅವರು ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಅವರ ಮಗಳು ರಿತನ್ಯಾ ವಿಜಯ್ ನಟಿಸಿದ್ದಾರೆ. ಅವರದ್ದು ಸಿನಿಮಾದಲ್ಲಿ ಮಗಳ ಪಾತ್ರವೇ ಎಂಬುದು ವಿಶೇಷ. ‘ನನ್ನ ಮಗಳು ಪದೇ ಪದೇ ಪಾತ್ರ ಹೇಗೆ ಬಂದಿದೆ ಎಂದು ಕೇಳುತ್ತಲೇ ಇದ್ದಳು. ನಾನು ಆಗ ಏನನ್ನೂ ಹೇಳೋಕೆ ಹೋಗಿರಲಿಲ್ಲ. ಇವತ್ತು ಹೆಮ್ಮೆಯಿಂದ ಹೇಳುತ್ತೇನೆ. ಅವಳು ನನ್ನ ಮಗಳಾಗಿದ್ದಕ್ಕೂ ಸಾರ್ಥಕವಾಯಿತು’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 28, 2026 08:32 AM
