ಜಾತ್ರೆಯ ರಥಕ್ಕೇ ಹೋಗಿ ಡಿಕ್ಕಿ ಹೊಡೆಯಿತು ಎತ್ತಿನಗಾಡಿ! ಇಬ್ಬರ ಸ್ಥಿತಿ ಗಂಭೀರ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದ ಅಂತರಘಟ್ಟಮ್ಮನ ಜಾತ್ರೆಯಲ್ಲಿ ಸಾಲುಸಾಲು ಅವಘಡಗಳು ಸಂಭವಿಸಿವೆ. ರಥೋತ್ಸವದ ನಂತರ ನಡೆಯುವ ಪಾನಕದ ಎತ್ತಿನ ಗಾಡಿಗಳ ಓಟದ ವೇಳೆ ನಿಯಂತ್ರಣ ತಪ್ಪಿದ ಎತ್ತಿನಗಾಡಿಗಳು ಜನರ ನಡುವೆ ನುಗ್ಗಿದವು. ಈ ವೇಳೆ ರಥಕ್ಕೆ ಡಿಕ್ಕಿಹೊಡೆಯುವುದಲ್ಲದೇ ಅಡ್ಡ ಬಂದ ವ್ಯಕ್ತಿಗೂ ಎತ್ತಿನಗಾಡಿ ಡಿಕ್ಕಿ ಹೊಡೆದಿದ್ದು, ಮತ್ತೊಬ್ಬ ವ್ಯಕ್ತಿ ಎತ್ತಿನಗಾಡಿಯ ಚಕ್ರಕ್ಕೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೀರೂರು ನಿವಾಸಿ ಚಂದ್ರಶೇಖರ್ (50) ಅವರಿಗೆ ಕಾಲು ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಕ್ಕಮಗಳೂರು, ಜನವರಿ 28: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದ ಅಂತರಘಟ್ಟಮ್ಮನ ಜಾತ್ರೆಯಲ್ಲಿ ಸಾಲುಸಾಲು ಅವಘಡಗಳು ಸಂಭವಿಸಿವೆ. ರಥೋತ್ಸವದ ನಂತರ ನಡೆಯುವ ಪಾನಕದ ಎತ್ತಿನ ಗಾಡಿಗಳ ಓಟದ ವೇಳೆ ನಿಯಂತ್ರಣ ತಪ್ಪಿದ ಎತ್ತಿನಗಾಡಿಗಳು ಜನರ ನಡುವೆ ನುಗ್ಗಿದವು. ಈ ವೇಳೆ ರಥಕ್ಕೆ ಡಿಕ್ಕಿಹೊಡೆಯುವುದಲ್ಲದೇ ಅಡ್ಡ ಬಂದ ವ್ಯಕ್ತಿಗೂ ಎತ್ತಿನಗಾಡಿ ಡಿಕ್ಕಿ ಹೊಡೆದಿದ್ದು, ಮತ್ತೊಬ್ಬ ವ್ಯಕ್ತಿ ಎತ್ತಿನಗಾಡಿಯ ಚಕ್ರಕ್ಕೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೀರೂರು ನಿವಾಸಿ ಚಂದ್ರಶೇಖರ್ (50) ಅವರಿಗೆ ಕಾಲು ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jan 28, 2026 10:27 AM

