Assembly Session; ನಾನು ಎನರ್ಜಿ ಮಿನಿಸ್ಟ್ರಾಗಿದ್ದಾಗ 25 ಕೆವಿ ಟಿಸಿ ಅಳವಡಿಸಲು ರೂ. 5,000 ಶುಲ್ಕ ನೀಡಬೇಕಿತ್ತು, ಈಗ ರೂ. 23,000: ಹೆಚ್ ಡಿ ರೇವಣ್ಣ, ಶಾಸಕ

|

Updated on: Jul 12, 2023 | 5:44 PM

ಏತನ್ಮಧ್ಯೆ ಸಚಿವ ಜಾರ್ಜ್ ಏನನ್ನೋ ಹೇಳಲು ಪ್ರಯತ್ನಿಸುತ್ತಾರಾದರೂ ರೇವಣ್ಣ ಅದಕ್ಕೆ ಅವಕಾಶ ನೀಡದೆ ಮಾತಾಡುತ್ತಲೇ ಹೋಗುತ್ತಾರೆ.

ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಹಿಂದೊಮ್ಮೆ ಇಂಧನ ಸಚಿವರಾಗಿದ್ದವರು. ತಮ್ಮ ಅವಧಿ ಮತ್ತು ಈಗ ಆ ಖಾತೆ ನೋಡಿಕೊಳ್ಳುತ್ತಿರುವ ಕೆಜೆ ಜಾರ್ಜ್ ಅವರ ಅವಧಿಗೆ ಹೋಲಿಕೆ ಮಾಡಿ ಸಚಿವರನ್ನು ಅವರು ತರಾಟೆಗೆ ತೆಗೆದುಕೊಂಡರು. ಟಿಸಿ ಅಳವಡಿಕೆ ಶುಲ್ಕವನ್ನು ಸಿಕ್ಕಾಪಟ್ಟೆ ಹೆಚ್ಚು ಮಾಡಲಾಗಿದೆ ಎಂದ ರೇವಣ್ಣ ತಾವು ಎನರ್ಜಿ ಮಿನಿಸ್ಟ್ರಾಗಿದ್ದಾಗ ಒಂದು 25 ಕೆವಿ ಟಿಸಿ ಅಳವಡಿಸಲು ರೂ. 5,000 ಪಡೆಯಲಾಗುತಿತ್ತು, ಅದರೆ ಅಷ್ಟೇ ಸಾಮರ್ಥ್ಯದ ಟಿಸಿ ಅಳವಡಿಸಲು ರೂ, 23,000 ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು. ತಮ್ಮಲ್ಲಿಗೆ ಪ್ರತಿದಿನ ಕನಿಷ್ಟ 500 ಜನ ಬಂದು ಟಿಸಿ ಶುಲ್ಕದ ಬಗ್ಗೆ ದೂರು ಹೇಳುತ್ತಾರೆ ಎಂದು ರೇವಣ್ಣ ಹೇಳಿದರು. ಸಮಯ ಮುಗಿದಿದೆ ನೀವು ಕೂತ್ಕೊಳ್ಳಿ ಅಂತ ಸ್ಪೀಕರ್ ಯುಟಿ ಖಾದರ್ ಹೇಳಿದರೂ ರೇವಣ್ಣ ಮಾತಾಡುವುದನ್ನು ಮುಂದುವರಿಸುತ್ತಾರೆ. ಏತನ್ಮಧ್ಯೆ ಸಚಿವ ಜಾರ್ಜ್ ಏನನ್ನೋ ಹೇಳಲು ಪ್ರಯತ್ನಿಸುತ್ತಾರಾದರೂ ರೇವಣ್ಣ ಅದಕ್ಕೆ ಅವಕಾಶ ನೀಡದೆ ಮಾತಾಡುತ್ತಲೇ ಹೋಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ