Karnataka Assembly Polls 2023; ಸಿದ್ದರಾಮಯ್ಯ ಜೊತೆ ಬಾಂಧವ್ಯ ಇರೋದು ನಿಜ ಅದರರ್ಥ ಕಾಂಗ್ರೆಸ್ ಪಕ್ಷ ಸೇರುವೆ ಅಂತಲ್ಲ: ಹೆಚ್ ಡಿ ರೇವಣ್ಣ
ಹೆಚ್ ಡಿ ದೇವೇಗೌಡ ಮತ್ತು ಕುಮಾರಣ್ಣ ತಮ್ಮ ನಾಯಕರಾಗಿರುವಾಗ ಬೇರೆ ನಾಯಕ ಮತ್ತು ಬೇರೆ ಪಕ್ಷದ ಬಗ್ಗೆ ಯೋಚನೆ ಮಾಡುವ ಪ್ರಮೇಯವೇ ಉದ್ಭವಿಸಲ್ಲ, ಎಂದು ರೇವಣ್ಣ ಹೇಳಿದರು.
ಹಾಸನ: ಒಂದೊಮ್ಮೆ ಜೆಡಿಎಸ್ ಪಕ್ಷದ ಹೈಕಮಾಂಡ್ ತಮ್ಮ ಪತ್ನಿ ಭವಾನಿಗೆ (Bhavani Revanna) ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡದಿದ್ದರೆ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna)ಕಾಂಗ್ರೆಸ್ ಪಕ್ಷ ಸೇರುತ್ತಾರೆಯೇ? ರೇವಣ್ಣ ಸಿದ್ದರಾಮಯ್ಯನವರ (Siddaramaiah) ಸಂಪರ್ಕದಲ್ಲಿರುವುದರಿಂದ ಈ ಪ್ರಶ್ನೆ ಹುಟ್ಟಿದ್ದು ಸಹಜವೇ. ಆದರೆ ಖುದ್ದು ರೇವಣ್ಣ ವದಂತಿಯನ್ನು ತಳ್ಳಿಹಾಕಿದ್ದಾರೆ. ತನ್ನ ಮತ್ತು ಸಿದ್ದರಾಮಯ್ಯ ನಡುವೆ ಬಾಂಧವ್ಯ ಇರೋದು ನಿಜ, ಅದರರ್ಥ ತಾನು ಕಾಂಗ್ರೆಸ್ ಸೇರ್ಪಡೆಯಾಗಬಹುದು ಅಂತಲ್ಲ. ಹೆಚ್ ಡಿ ದೇವೇಗೌಡ ಮತ್ತು ಕುಮಾರಣ್ಣ ತಮ್ಮ ನಾಯಕರಾಗಿರುವಾಗ ಬೇರೆ ನಾಯಕ ಮತ್ತು ಬೇರೆ ಪಕ್ಷದ ಬಗ್ಗೆ ಯೋಚನೆ ಮಾಡುವ ಪ್ರಮೇಯವೇ ಉದ್ಭವಿಸಲ್ಲ, ಎಂದು ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos