‘ಇದು ಸಮಾಧಿ ಅಲ್ಲ, ಡಾ. ರಾಜ್​ ಬೃಂದಾವನ’: ಅಣ್ಣಾವ್ರ ಪುಣ್ಯಸ್ಮರಣೆ ದಿನ ರಾಘಣ್ಣ ಹೀಗೆ ಹೇಳಿದ್ದೇಕೆ?

‘ಇದು ಸಮಾಧಿ ಅಲ್ಲ, ಡಾ. ರಾಜ್​ ಬೃಂದಾವನ’: ಅಣ್ಣಾವ್ರ ಪುಣ್ಯಸ್ಮರಣೆ ದಿನ ರಾಘಣ್ಣ ಹೀಗೆ ಹೇಳಿದ್ದೇಕೆ?

ಮದನ್​ ಕುಮಾರ್​
|

Updated on:Apr 12, 2023 | 5:30 PM

Dr Rajkumar: ಡಾ. ರಾಜ್​ಕುಮಾರ್​ ಅವರ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್​ ಅವರು ಈ ವಿಚಾರ ತಿಳಿಸಿದ್ದಾರೆ.

ಮೇರುನಟ ಡಾ. ರಾಜ್​ಕುಮಾರ್ (Dr Rajkumar)​ ಅವರು ನಿಧನರಾಗಿ ಇಂದಿಗೆ (ಏಪ್ರಿಲ್​ 12) ಬರೋಬ್ಬರಿ 17 ವರ್ಷ ಕಳೆದಿದೆ. ಈ ಪ್ರಯುಕ್ತ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅವರ ಸಮಾಧಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಇಂದು ರಾಜ್​ ಕುಟುಂಬದ ಸದಸ್ಯರು ಅಣ್ಣಾವ್ರ ಸಮಾಧಿಗೆ (Dr Rajkumar Samadhi) ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್​ಕುಮಾರ್​ ಅವರು ಮಾತನಾಡಿದ್ದಾರೆ. ‘ನೀವು ಇದನ್ನು ಸಮಾಧಿ ಅಂತ ಕರೆಯಬೇಡಿ. ದಯವಿಟ್ಟು ಬೃಂದಾವನ ಅಂತ ಕರೆಯಿರಿ ಎಂದು ನನಗೆ ಐಎಎಸ್​ ಆಫೀಸರ್​ ಒಬ್ಬರು ಬರೆದು ಕಳಿಸಿದ್ದರು. ಬೃಂದಾವನ ಅಲ್ಲದೇ ಹೋಗಿದ್ದರೆ ಇಂದಿಗೂ ಇಷ್ಟು ಜನ ಯಾಕೆ ಬರುತ್ತಿದ್ದರು? ಪ್ರತಿ ವರ್ಷ ಅಭಿಮಾನಿಗಳು ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ’ ಎಂದು ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Apr 12, 2023 05:30 PM