ಮತ್ತೆ ಧಾರಾವಾಹಿ ನಿರ್ಮಾಣಕ್ಕೆ ಇಳಿದ ರಾಘವೇಂದ್ರ ರಾಜ್ಕುಮಾರ್; ಆಗಸ್ಟ್ 1ರಿಂದ ‘ವಿಜಯದಶಮಿ’ ಪ್ರಸಾರ
ಸಿರಿ ಕನ್ನಡ ವಾಹಿನಿಯಲ್ಲಿ ಆಗಸ್ಟ್ 1ರಿಂದ ‘ವಿಜಯದಶಮಿ’ ಹಾಗೂ ‘ಅಮ್ಮನ ಮದುವೆ’ ಎಂಬ ಎರಡು ಹೊಸ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಆ ಪೈಕಿ ‘ವಿಜಯದಶಮಿ’ ಧಾರಾವಾಹಿಗೆ ರಾಘವೇಂದ್ರ ರಾಜಕುಮಾರ್ ಬಂಡವಾಳ ಹೂಡುತ್ತಿದ್ದಾರೆ.
ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ನಟನೆ ಜತೆಗೆ ಸಿನಿಮಾ ಹಾಗೂ ಧಾರಾವಾಹಿ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಈಗ ಅವರು ಮತ್ತೆ ಧಾರಾವಾಹಿ ನಿರ್ಮಾಣಕ್ಕೆ ಇಳಿದಿದ್ದಾರೆ. ‘ವಿಜಯದಶಮಿ’ (Vijayadashami) ಹೆಸರಿನ ಧಾರಾವಾಹಿಯನ್ನು ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜ್ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಸಿರಿ ಕನ್ನಡ’ ವಾಹಿನಿಯಲ್ಲಿ ಈ ಧಾರಾವಾಹಿ ಆಗಸ್ಟ್ 1ರಿಂದ ಪ್ರಸಾರ ಆರಂಭಿಸಲಿದೆ.
ಸಿರಿ ಕನ್ನಡ ವಾಹಿನಿಯಲ್ಲಿ ಆಗಸ್ಟ್ 1ರಿಂದ ‘ವಿಜಯದಶಮಿ’ ಹಾಗೂ ‘ಅಮ್ಮನ ಮದುವೆ’ ಎಂಬ ಎರಡು ಹೊಸ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಆ ಪೈಕಿ ‘ವಿಜಯದಶಮಿ’ ಧಾರಾವಾಹಿಗೆ ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಪತ್ನಿ ಮಂಗಳಾ ರಾಘವೇಂದ್ರ ರಾಜಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಹತ್ತೊಂಭತ್ತಕ್ಕೂ ಅಧಿಕ ಮುಖ್ಯಪಾತ್ರಧಾರಿಗಳಿದ್ದು, 70ಕ್ಕೂ ಅಧಿಕ ಕಲಾವಿದರು ಅಭಿನಯಿಸುತ್ತಿದ್ದಾರೆ ಅನ್ನೋದು ವಿಶೇಷ.
ರಾಘವೇಂದ್ರ ರಾಜ್ಕುಮಾರ್ ಅವರು ಈಗಾಗಲೇ ‘ಮರಳಿ ಬಂದಳು ಸೀತೆ’ (2019), ‘ಜೀವ ಹೂವಾಗಿದೆ’ (2020) ಹೆಸರಿನ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ‘ವಿಜಯದಶಮಿ’ ಮೂಲಕ ಮತ್ತೆ ನಿರ್ಮಾಣಕ್ಕೆ ಇಳಿದಿದ್ದಾರೆ. ಭಾರತದ ವಿವಿಧ ಸ್ಥಳಗಳಲ್ಲಿ ಈ ಧಾರಾವಾಹಿಯ ಚಿತ್ರೀಕರಣ ನಡೆಯಲಿದೆ.
ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ‘ವಿಜಯದಶಮಿ’ ಪ್ರಸಾರ ಕಾಣಲಿದೆ. ಇತ್ತೀಚೆಗೆ ಈ ಧಾರಾವಾಹಿಯ ಟ್ರೇಲರ್ ರಿಲೀಸ್ ಆಗಿದೆ. ಶ್ರೀಮುರಳಿ, ನಿರ್ದೇಶಕ-ನಟ ರಿಷಬ್ ಶೆಟ್ಟಿ ಮೊದಲಾದವರು ಈ ಧಾರಾವಾಹಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಶಶಿ ಈ ಧಾರಾವಾಹಿಗೆ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಅಮೆರಿಕದಿಂದ ಬೆಂಗಳೂರಿಗೆ ಮರಳಿದ ‘ಕನ್ನಡತಿ’ ಧಾರಾವಾಹಿಯ ರತ್ನಮಾಲಾ; ಶೀಘ್ರವೇ ಧಾರವಾಹಿಗೆ ರೀ ಎಂಟ್ರಿ
ಅಮ್ಮನ ಮದುವೆ ಕಥೆ ಏನು?
ಅಮ್ಮ-ಮಗಳ ವಾತ್ಸಲ್ಯದ ಕಥೆಯನ್ನು ‘ಅಮ್ಮನ ಮದುವೆ’ ಧಾರಾವಾಹಿ ಹೊಂದಿದೆ. ಆಗಸ್ಟ್ 1ರಿಂದ ಆರಂಭವಾಗುತ್ತಿರುವ ಈ ಧಾರಾವಾಹಿ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರ ಕಾಣಲಿದೆ. ನ್ಯೂ ಡಿ2 ಮೀಡಿಯಾ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಮಗಳು ಮದುವೆ ವಯಸ್ಸಿಗೆ ಬಂದಿರುತ್ತಾಳೆ. ಆದರೆ, ಆಕೆ ತಾಯಿಯ ಒಂಟಿತನ ದೂರವಾಗಿಸಲು ಪ್ರಯತ್ನಿಸುತ್ತಾಳೆ. ಇದು ಧಾರಾವಾಹಿಯ ಕಥೆ.