ವರುಧಿನಿಯ ಕಳ್ಳಾಟ ಬಯಲು; ಕೈ-ಕಾಲು ಮುರಿಯುವ ಎಚ್ಚರಿಕೆ ನೀಡಿದ ಹರ್ಷ
ಹರ್ಷ ಹಾಗೂ ಭುವಿ ಯಾವ ರೆಸ್ಟೋರೆಂಟ್ಗೆ ತೆರಳುತ್ತಾರೆ ಎಂಬ ವಿಚಾರ ವರುಧಿನಿ ಕಿವಿಗೆ ಬಿದ್ದಿದೆ. ಈ ಕಾರಣಕ್ಕೆ ಆಕೆ ಒಂದು ಮಾಸ್ಟರ್ಪ್ಲ್ಯಾನ್ ಮಾಡಿದ್ದಾಳೆ.
‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಭುವನೇಶ್ವರಿ ಮದುವೆ ನೆರವೇರಿ ಕೆಲ ವಾರಗಳು ಕಳೆದಿವೆ. ಇವರು ಹಾಯಾಗಿ ಸಂಸಾರ ನಡೆಸಲು ಕೊಡಬಾರದು ಎಂದು ವರುಧಿನಿ ಹಾಗೂ ಸಾನಿಯಾ ಪ್ರಯತ್ನಿಸುತ್ತಿದ್ದಾರೆ. ಆದರೆ, ಇವರ ಪ್ಲ್ಯಾನ್ಗಳು ಫ್ಲಾಪ್ ಆಗುತ್ತಿವೆ. ಈಗ ವರುಧಿನಿ ಮಾಡಿದ ಕಳ್ಳಾಟ ಬಯಲಾಗಿದೆ. ಅವಳು ಹರ್ಷನ ಬಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಹರ್ಷನ ಕಡೆಯಿಂದ ವರುಧಿನಿಗೆ ಎಚ್ಚರಿಕೆ ಕೂಡ ಹೋಗಿದೆ. ಹರ್ಷನಿಗೆ ಹತ್ತಿರ ಆಗಬೇಕು ಎಂದು ಪ್ರಯತ್ನಿಸಿದ ವರುಧಿನಿಗೆ ಈ ಬೆಳವಣಿಗೆಯಿಂದ ತೀವ್ರ ಹಿನ್ನಡೆ ಆಗಿದೆ.
ಭುವಿ ಹಾಗೂ ಹರ್ಷ ಊಟಕ್ಕೆ ಒಟ್ಟಿಗೆ ತೆರಳಲು ಪ್ಲ್ಯಾನ್ ರೂಪಿಸಿದರು. ರೆಸ್ಟೋರೆಂಟ್ ಕೂಡ ಫೈನಲ್ ಆಯಿತು. ಹೇಳಿದ ಸಮಯಕ್ಕಿಂತ 10 ನಿಮಿಷ ಮೊದಲೇ ಬರುವ ಭರವಸೆಯನ್ನು ಭುವಿ ನೀಡಿದಳು. ಹರ್ಷ ಹಾಗೂ ಭುವಿ ಯಾವ ರೆಸ್ಟೋರೆಂಟ್ಗೆ ತೆರಳುತ್ತಾರೆ ಎಂಬ ವಿಚಾರ ವರುಧಿನಿ ಕಿವಿಗೆ ಬಿದ್ದಿದೆ. ಈ ಕಾರಣಕ್ಕೆ ಆಕೆ ಒಂದು ಮಾಸ್ಟರ್ಪ್ಲ್ಯಾನ್ ಮಾಡಿದ್ದಾಳೆ.
‘ನಾನು ಮನೆಯ ಬಾಲ್ಕನಿಯಲ್ಲಿ ಲಾಕ್ ಆಗಿದ್ದೇನೆ. ದಯವಿಟ್ಟು ಬಂದು ನನ್ನನ್ನು ತಪ್ಪಿಸು’ ಎಂದು ಭುವಿ ಬಳಿ ವರು ಕೋರಿದ್ದಾಳೆ. ಇದನ್ನು ನಂಬಿದ ಭುವಿ ಆಕೆಯ ಮನೆಗೆ ತೆರಳಿದ್ದಾಳೆ. ಆದರೆ ಅಲ್ಲಿ ಡೋರ್ ಲಾಕ್ ಆಗಿತ್ತು. ಆ ಸಂದರ್ಭದಲ್ಲಿ ವರುಧಿನಿ ಹರ್ಷ ಇದ್ದ ರೆಸ್ಟೋರೆಂಟ್ನಲ್ಲಿ ಹಾಜರಿ ಹಾಕಿದ್ದಾಳೆ.
ತಾನಿದ್ದ ಜಾಗದಲ್ಲಿ ವರುಧಿನಿಯನ್ನು ನೋಡಿ ಹರ್ಷನಿಗೆ ಶಾಕ್ ಆಗಿದೆ. ಒಂದು ಸಣ್ಣ ಗುಮಾನಿ ಕೂಡ ಬಂದಿದೆ. ಭುವಿಯ ಕಾರ್ ಡ್ರೈವರ್ಗೆ ಕರೆ ಮಾಡಿ ಆಕೆ ಎಲ್ಲಿದ್ದಾಳೆ ಎಂದು ವಿಚಾರಿಸಿದಾಗ ವರುಧಿನಿಯ ಮನೆ ಏರಿಯಾದಲ್ಲಿ ಇರುವ ವಿಚಾರ ಗೊತ್ತಾಗಿದೆ. ಆಗ ಹರ್ಷನಿಗೆ ಇದೆಲ್ಲಾ ವರುಧಿನಿಯ ಕಿತಾಪತಿ ಎಂಬುದು ಪಕ್ಕಾ ಆಗಿದೆ.
ಮನೆಯಲ್ಲಿ ವರುಧಿನಿ ಇಲ್ಲ ಎನ್ನುವ ವಿಚಾರ ಗೊತ್ತಾದ ನಂತರ ಭುವಿ ರೆಸ್ಟೋರೆಂಟ್ಗೆ ಬಂದಿದ್ದಾಳೆ. ಹರ್ಷ ಹಾಗೂ ಭುವಿ ಒಟ್ಟಾಗಿ ಊಟ ಸವಿದಿದ್ದಾರೆ. ಈ ಸಂದರ್ಭದಲ್ಲಿ ವರುಧಿನಿಗೆ ಹೊಟ್ಟೆ ಉರಿ ಆಗುವಂತೆ ಮಾಡಿದ್ದಾನೆ ಹರ್ಷ. ಅಷ್ಟೇ ಅಲ್ಲ, ‘ನನ್ನ ಹಾಗೂ ಭುವಿ ಮಧ್ಯೆ ಕಡ್ಡಿ ಆಡಿಸಲು ಬಂದರೆ ಕಾಲು ಮುರಿಯುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾನೆ.
ಇದನ್ನೂ ಓದಿ: ಒಂದು ವಿಶೇಷ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದ ‘ಕನ್ನಡತಿ’ ನಟಿ ರಂಜನಿ ರಾಘವನ್
ಹರ್ಷನಿಗೆ ಹತ್ತಿರ ಆಗಬೇಕು ಎಂಬುದು ವರುಧಿನಿಯ ಪ್ಲ್ಯಾನ್ ಆಗಿತ್ತು. ಆದರೆ, ಆಕೆಗೆ ಹರ್ಷನ ಎಚ್ಚರಿಕೆಯಿಂದ ತೀವ್ರ ಮುಖಭಂಗ ಆಗಿದೆ. ಹರ್ಷನಿಗೆ ತನ್ನ ನಿಜವಾದ ಮುಖ ಗೊತ್ತಾಗಿರುವುದಕ್ಕೆ ಆಕೆಗೆ ಭಯ ಶುರುವಾಗಿದೆ.