Karnataka Assembly Polls; ರೇವಣ್ಣ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ, ಅಂಥ ಮಾತುಗಳಿಗೆ ಕಿವಿಗೊಡಬೇಡಿ: ಭವಾನಿ ರೇವಣ್ಣ
ರೇವಣ್ಣನವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವ ಜನರ ಮಾತುಗಳಿಗೆ ಸರ್ವಥಾ ಕಿವಿಗೊಡಬೇಡಿ ಎಂದು ಕಾರ್ಯಕರ್ತರಿಗೆ ಭವಾನಿ ಹೇಳಿದರು
ಹಾಸನ: ಭವಾನಿ ರೇವಣ್ಣ (Bhavani Revanna) ಹೊಳೆನರಸೀಪುರದ ಕ್ಷೇತ್ರದಲ್ಲಿ ತಮ್ಮ ಪತಿ ಹೆಚ್ ಡಿ ರೇವಣ್ಣ (HD Revanna) ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ರೇವಣ್ಣನವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವ ಜನರ ಮಾತುಗಳಿಗೆ ಸರ್ವಥಾ ಕಿವಿಗೊಡಬೇಡಿ, ಕಷ್ಟ ಹೇಳಿಕೊಂಡು ಮನೆಗೆ ಹೋದರೆ ಬೈದು ಕಳಿಸುತ್ತಾರೆ ಅಂತ ರೇವಣ್ಣ ಬಗ್ಗೆ ಜನ ಹೇಳುತ್ತಿದ್ದಾರೆ. ಅದು ಸುಳ್ಳು ಅಂತ ಎಲ್ಲರಿಗೂ ಗೊತ್ತು. ನಮ್ಮ ಮನೆಯ ಮುಂದೆ ಎಷ್ಟು ಜನ ನೆರೆದಿರುತ್ತಾರೆ ಅಂತ ನೀವೆಲ್ಲ ನೋಡಿದ್ದೀರಿ ಅಂತ ಭವಾನಿ ಹೇಳಿದರು. ಅಣ್ಣ (ರೇವಣ್ಣ) ಕ್ಷೇತ್ರಕ್ಕಾಗಿ ಏನೆಲ್ಲ ಮಾಡಿದ್ದಾರೆ ಅನ್ನೋದನ್ನ ಒಮ್ಮೆ ಕುಳಿತುಕೊಂಡು ಕಣ್ಣುಮುಚ್ಚಿ ಯೋಚನೆ ಮಾಡಿ ಮತ್ತು ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ, ಒಂದೊಂದಾಗಿ ಉತ್ತರಗಳು ಸಿಗುತ್ತಾ ಹೋಗುತ್ತವೆ ಎಂದು ಭವಾನಿ ಕಾರ್ಯಕರ್ತರಿಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos