Karnataka Assembly Polls: ಆರ್ ಅಶೋಕ ಮತ್ತು ವಿ ಸೋಮಣ್ಣಗೆ ಹೈಕಮಾಂಡ್ ನೀಡಿರುವ ಕ್ಷೇತ್ರಗಳು ಮಾಸ್ಟರ್ ಸ್ಟ್ರೋಕ್ ಎಂದ ಸಿಪಿ ಯೋಗೇಶ್ವರ
ಅವರಿಬ್ಬರೂ ತಮಗಾಗಿರುವ ಅನ್ಯಾಯವನ್ನು ಹೇಳಿಕೊಂಡು ಮಾಧ್ಯಮ ಮತ್ತು ಆಪ್ತರ ಎದುರು ಗೋಳಿಡುತ್ತಿದ್ದರೆ ಯೋಗೇಶ್ವರ್ ಮಾತ್ರ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆದಿರುವ ಸಿಪಿ ಯೋಗೇಶ್ವರ (CP Yogeshwar) ಪ್ರಕಾರ ವಿ ಸೋಮಣ್ಣರನ್ನು (V Somanna) ವರುಣಾದಲ್ಲಿ ಸಿದ್ದರಾಮಯ್ಯ (Siddaramaiah) ವಿರುದ್ಧ ಮತ್ತು ಆರ್ ಅಶೋಕ ಅವರನ್ನು ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಕಣಕ್ಕಿಳಿಸಿರುವುದು ಹೈಕಮಾಂಡ್ ನ ಮಾಸ್ಟರ್ ಸ್ಟ್ರೋಕ್! ಅವರಿಬ್ಬರೂ ತಮಗಾಗಿರುವ ಅನ್ಯಾಯವನ್ನು ಹೇಳಿಕೊಂಡು ಮಾಧ್ಯಮ ಮತ್ತು ಆಪ್ತರ ಎದುರು ಗೋಳಿಡುತ್ತಿದ್ದರೆ ಯೋಗೇಶ್ವರ್ ಮಾತ್ರ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಲವಾರು ಕ್ಷೆತ್ರಗಳಲ್ಲಿ ಎದುರಾಳಿಗಳು ಸಪ್ಪೆಯೆನಿಸುವ ಸ್ಥಿತಿ ನಿರ್ಮಿಸಿರುವುದರಿಂದ ಅವರ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಬಲಿಷ್ಠ ಅಭ್ಯರ್ಥಿಗಳನ್ನು ಹಾಕಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos