Karnataka Assembly Polls: ಶಾಸಕಿಯಾಗುವ ಮೊದಲೇ ಭವಾನಿ ರೇವಣ್ಣ ತಾನೊಬ್ಬ ಚಾಣಾಕ್ಷ ರಾಜಕಾರಣಿ ಅನ್ನೋದನ್ನು ಸಾಬೀತು ಮಾಡುತ್ತಿದ್ದಾರೆ!
ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿಯವರೊಂದಿಗೆ ನಡೆದ ಸಭೆಯಲ್ಲಿ ಏನು ಚರ್ಚೆಯಾಯಿತು ಅಂತ ಮಾಧ್ಯಮದವರು ಕೇಳಿದಾಕ್ಷಣ ಮಾತಾಡದೆ, ಮುಗಳ್ನಗುತ್ತಾ ಅಲ್ಲಿಂದ ಹೊರಟುಬಿಡುತ್ತಾರೆ.
ಹಾಸನ: ಒಬ್ಬ ಚಾಣಾಕ್ಷ ರಾಜಕಾರಣಿಯ ಎಲ್ಲ ಲಕ್ಷಣಗಳು ಭವಾನಿ ರೇವಣ್ಣ (Bhavani Revanna) ಅವರಲ್ಲ್ಲಿ ಕಾಣುತ್ತಿವೆ. ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಗಾಗಿ ಅವರು ತೀವ್ರ ಪ್ರಯತ್ನ ನಡೆಸಿರುವುದು ಗೊತ್ತಿರುವ ಸಂಗತಿಯೇ. ಇವತ್ತು ಅವರು ಹಾಸನ ನಗರದಲ್ಲಿ ನಡೆದ ಮಹಾವೀರ ಜಯಂತಿ (Mahavir Jayanti) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು ತಮ್ಮ ತವರು ಸಾಲಿಗ್ರಾಮದಿಂದ ಜೈನ ಸಮುದಾಯದವರು (Jain community) ಕಾರ್ಯಕ್ರಮಕ್ಕೆ ಆಗಮಿಸಿದ್ದರು ಅವರನ್ನೆಲ್ಲ ನೋಡಿ ಬಹಳ ಖುಷಿಯಾಯಿತು ಎಂದು ಹೇಳುತ್ತಾರೆ. ಆದರೆ, ಮಾಧ್ಯಮದವರು, ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿಯವರೊಂದಿಗೆ ನಡೆದ ಸಭೆಯಲ್ಲಿ ಏನು ಚರ್ಚೆಯಾಯಿತು ಅಂತ ಕೇಳಿದಾಕ್ಷಣ ಮಾತಾಡದೆ, ಮುಗಳ್ನಗುತ್ತಾ ಅಲ್ಲಿಂದ ಹೊರಟುಬಿಡುತ್ತಾರೆ. ಇದೇ ತಾನೇ ಚಾಣಾಕ್ಷ ರಾಜಕಾರಣಿಯ ಲಕ್ಷಣ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos