Karnataka Assembly Polls: ಟಿಕೆಟ್ ಸಿಗದಿದ್ದರೆ ಭವಾನಿ ರೇವಣ್ಣ ಪಕ್ಷೇತರರಾಗಿ ಸ್ಪರ್ಧಿಸುವ ವಿಚಾರ ನನಗೆ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ

Karnataka Assembly Polls: ಟಿಕೆಟ್ ಸಿಗದಿದ್ದರೆ ಭವಾನಿ ರೇವಣ್ಣ ಪಕ್ಷೇತರರಾಗಿ ಸ್ಪರ್ಧಿಸುವ ವಿಚಾರ ನನಗೆ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2023 | 2:40 PM

ಹೆಚ್ ಡಿ ದೇವೇಗೌಡ ದೆಹಲಿಗೆ ಹೋಗಿದ್ದು ಇವತ್ತು ವಾಪಸ್ಸಾಗಲಿದ್ದಾರೆ. ಅವರು ಬಂದ ಬಳಿಕ ಟಿಕೆಟ್ ವಿಷಯ ಅಂತಿಮಗೊಳ್ಳುತ್ತದೆ ಎಂದು ಕುಮಾರಸ್ವಾಮಿ ಹೇಳಿದರು

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗೆ ಸಂಬಂಧಿಸಿದಂತೆ ತಮ್ಮ ನಿಲುವಿಗೂ ಈಗಲೂ ಬದ್ಧ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ರಾಮನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಹೆಚ್ ಡಿ ದೇವೇಗೌಡ (HD Devegowda) ದೆಹಲಿಗೆ ಹೋಗಿದ್ದು ಇವತ್ತು ವಾಪಸ್ಸಾಗಲಿದ್ದಾರೆ. ಅವರು ಬಂದ ಬಳಿಕ ಟಿಕೆಟ್ ವಿಷಯ ಅಂತಿಮಗೊಳ್ಳುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಭವಾನಿ ರೇವಣ್ಣ (Bhavani Revanna) ಟಿಕೆಟ್ ಸಿಕ್ಕದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುತ್ತೇನೆಂದು ಹೇಳಿರುವ ಬಗ್ಗೆ ಕುಮಾರಸ್ವಾಮಿಯವರನ್ನು ಕೇಳಿದಾಗ, ತಮಗೇನೂ ಗೊತ್ತಿಲ್ಲ, ಅದು ಕೇವಲ ವದಂತಿಯಾಗಿರಬಹುದು, ಮಾಧ್ಯಮದವರು ಅವರನ್ನೇ ಕೇಳುವುದು ಒಳಿತು ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ