Assembly polls: ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಜೆಡಿಎಸ್ ಅಭ್ಯರ್ಥಿ ಅಂತ ಅನಧಿಕೃತ ಘೋಷಣೆ?
ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳ ವಿವರ ಇರುವ ಹೊತ್ತಿಗೆಯೊಂದನ್ನು ಪಕ್ಷದ ಜಿಲ್ಲಾ ಘಟಕ ಬಿಡುಗಡೆ ಮಾಡಿದ್ದು ಅದರಲ್ಲಿ ಜಿಲ್ಲೆಯ ಇತರ ನಾಯಕರ ಜೊತೆ ಭವಾನಿ ರೇವಣ್ಣ ಅವರ ಫೋಟೋ ಕೂಡ ಇದೆ.
ಹಾಸನ: ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಭವಾನಿ ರೇವಣ್ಣ (Bhavani Revanna) ಅವರನ್ನೇ ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿ ಅಂತ ತೀರ್ಮಾನಿಸಲಾಗಿದೆಯೇ? ಇಂಥದೊಂದು ಪ್ರಶ್ನೆ ಏಳೋದಿಕ್ಕೆ ಕಾರಣವಿದೆ ಮಾರಾಯ್ರೇ. ವಿಷಯವೇನೆಂದರೆ, ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳ ವಿವರ ಇರುವ ಹೊತ್ತಿಗೆಯೊಂದನ್ನು ಪಕ್ಷದ ಜಿಲ್ಲಾ ಘಟಕ ಬಿಡುಗಡೆ ಮಾಡಿದ್ದು ಅದರಲ್ಲಿ ಜಿಲ್ಲೆಯ ಇತರ ನಾಯಕರ ಜೊತೆ ಭವಾನಿ ರೇವಣ್ಣ ಅವರ ಫೋಟೋ ಕೂಡ ಇದೆ. ಭವಾನಿ, ಒಬ್ಬ ಕಾರ್ಯಕರ್ತೆಯಾಗಿ (worker) ಅಥವಾ ಜಿಲ್ಲಾ ಪರಿಷತ್ ಸದಸ್ಯರಾಗಿ (ZP member) ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದಾರೆಯೇ ಅಥವಾ ಈಗ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಮುಂದೆ ಅಭಿವೃದ್ಧಿ ಮಾಡುತ್ತಾರೆಯೇ? ಪ್ರಶ್ನೆಗೆ ಹೆಚ್ ಡಿ ಕುಮಾರಸ್ವಾಮಿಯವರೇ ಉತ್ತರ ನೀಡಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos