ಹಾಸನ: ಇದನ್ನು ಭವಾನಿ ರೇವಣ್ಣನವರ (Bhavani Revanna) ಗೆಲುವು ಅನ್ನಬೇಕೋ ಅಥವಾ ಹಾಸನ ಜೆಡಿಎಸ್ ಅಭ್ಯರ್ಥಿಯನ್ನು ಅಖೈರುಗೊಳಿಸಲು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸಫಲರಾಗದೆ ಕೈಯೆತ್ತಿದರೋ ಅಂತ ಸ್ಪಷ್ಟವಾಗುತ್ತಿಲ್ಲ. ವಿಷಯವೇನೆಂದರೆ, ಹಾಸನ ವಿಧಾನಸಭಾ ಕ್ಷೇತ್ರದಿಂದ (Hassan constituency) ಜೆಡಿಎಸ್ ಟೆಕೆಟ್ ಆಕಾಂಕ್ಷಿಯಾಗಿರುವ ಭವಾನಿ ರೇವಣ್ಣ ಅವರು ಇದ್ದಕ್ಕಿದ್ದಂತೆ ಸಕ್ರಿಯರಾಗಿ ಹಾಸನ ಮತಕ್ಷೇತ್ರದಲ್ಲಿ ಸುತ್ತಾಡಲಾರಂಭಿಸಿದ್ದಾರೆ. ಪತಿ ಹೆಚ್ ಡಿ ರೇವಣ್ಣರೊಂದಿಗೆ ಹಲವಾರು ದೇವಸ್ಥಾನಗಳಿಗೆ ಬೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಅವರ ಓಡಾಟ, ಗುಡಿಗಳಲ್ಲಿ ಪೂಜೆ ಗಮನಿಸಿದರೆ, ಅಂತಿಮವಾಗಿ ಹಾಸನ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನೋದು ಗುಟ್ಟಾಗೇನೂ ಉಳಿಯುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ