Amit Shah in Ballari: ಕಾಂಗ್ರೆಸ್ ಭದ್ರಕೋಟೆ ಸಂಡೂರುನಿಂದ ಬೆಜೆಪಿಯ ವಿಜಯಸಂಕಲ್ಪ ಯಾತ್ರೆಗೆ ಗೃಹಸಚಿವರಿಂದ ಚಾಲನೆ

Amit Shah in Ballari: ಕಾಂಗ್ರೆಸ್ ಭದ್ರಕೋಟೆ ಸಂಡೂರುನಿಂದ ಬೆಜೆಪಿಯ ವಿಜಯಸಂಕಲ್ಪ ಯಾತ್ರೆಗೆ ಗೃಹಸಚಿವರಿಂದ ಚಾಲನೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 23, 2023 | 11:09 AM

ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವುದರಿಂದ ಚುನಾವಣಾ ಚಾಣಕ್ಯ ಅಮಿತ್ ಶಾ ಮ್ಯಾಜಿಕ್ ಹೇಗೆ ಕೆಲಸ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕು.

ಬಳ್ಳಾರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ತಿಂಗಳು ಮಾತ್ರ ಉಳಿದಿವೆ, ಆಡಳಿತಾರೂಢ ಬಿಜೆಪಿ ಮತದಾರನ್ನು ಒಲಿಸಿಕೊಳ್ಳಲು ಭಗೀರಥ ಪ್ರಯತ್ನಗಳನ್ನು ನಡೆಸಿದೆ. ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಮೂರು ಭೇಟಿಗಳ ನಂತರ ಅಮಿತ್ ಶಾ (Amit Shah) ಸಹ ತಮ್ಮ ಮೂರನೇ ಭೇಟಿಗಾಗಿ ಇಂದು ಆಗಮಿಸಲಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಘಟಕವು ಬಳ್ಳಾರಿ ಜಿಲ್ಲೆಯ ಸಂಡೂರಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು (Vijaya Sankalp Yatre) ಆರಂಭಿಸಲಿದೆ. ಕೇಂದ್ರ ಗೃಹ ಸಚಿವರ ಕಾರ್ಯಕ್ರಮಕ್ಕಾಗಿ ಅದ್ದೂರಿಯಾಗಿ ವೇದಿಕೆಯನ್ನು ತಯಾರು ಮಾಡಲಾಗಿದೆ ಮತ್ತು ಸುಮಾರು ಒಂದು ಲಕ್ಷ ಜನರಿಗೆ ಆಸನಗಳ ಜೊತೆಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವುದರಿಂದ ಚುನಾವಣಾ ಚಾಣಕ್ಯ ಅಮಿತ್ ಶಾ ಮ್ಯಾಜಿಕ್ ಹೇಗೆ ಕೆಲಸ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 23, 2023 11:09 AM