ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಪ್ರಚಾರ ದಿನೇ ದಿನೇ ರಂಗೇರುತ್ತಿದೆ. ಅದ್ರಲ್ಲೂ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಸ್ವತ: ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ತಾರೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಸಂಡೂರು ಕ್ಷೇತ್ರದ ಮೂಲಕವೇ ವಿಜಯ ಸಂಕಲ್ಪ ಯಾತ್ರೆ ಆರಂಭಿಸುತ್ತಿರುವ ಶಾ ಬಳ್ಳಾರಿಯ (Ballari) ಸಂಡೂರು (Sanduru) ಕೋಟೆ ಮೇಲೆ ಕೇಸರಿ ಪತಾಕೆ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಸಂಡೂರಿನಲ್ಲಿಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಭಾಗಿಯಾಗುವ ಅಮಿತ್ ಶಾಗೆ ಬಿಜೆಪಿ ನಾಯಕರು ಬೆಳ್ಳಿ ಗದೆ ನೀಡಲಿದ್ದಾರೆ.