Assembly Session; ಅಡ್ಜಸ್ಟ್ಮೆಂಟ್ ರಾಜಕಾರಣಿ ಅಂತ ಪ್ರೂವ್ ಮಾಡಿದರೆ ಅವತ್ತೇ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ: ಸಿದ್ದರಾಮಯ್ಯ, ಮುಖ್ಯಮಂತ್ರಿ
80 ಯೂನಿಟ್ ವಿದ್ಯುತ್ ಬಳಸುವವರಿಗೆ 80 ಯೂನಿಟ್ ಮಾತ್ರ ಉಚಿತ ಸಿಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದಾಗ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬೇರೆ ಸದಸ್ಯರು ಆಕ್ಷೇಪಣೆ ಎತ್ತಿದರು.
ಬೆಂಗಳೂರು: ಸದನದಲ್ಲಿಂದು ಹೊಂದಾಣಿಕೆ ರಾಜಕಾರಣಿ (adjustment politician) ಅಂತ ತಮ್ಮ ವಿರುದ್ಧ ವಿರೋಧ ಪಕ್ಷದ ನಾಯಕರು ಮಾಡಿದ ಅರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿರುಗೇಟು ನೀಡಿದರು. ಬಿಎಸ್ ಯಡಿಯೂರಪ್ಪ (BS Yediyurappa), ಆರ್ ವಿ ದೇಶಪಾಂಡೆ (RV Deshpande) ಮತ್ತು ಬಿಆರ್ ಪಾಟೀಲ್ (BR Patil) ಮೊದಲಾದ ನಾಯಕರೊಂದಿಗೆ ವಿಧಾನ ಸಭೆಗೆ ಬಂದ ತಾವು ಹಲವಾರು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದರೂ ಯಾವುದೇ ಪಕ್ಷ ಅಥವಾ ಸರ್ಕಾರದೊಂದಿಗೆ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ಅಂಥ ಒಂದೇ ಒಂದು ನಿದರ್ಶನ ತೋರಿಸಿದರೆ ಕೂಡಲೇ ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದರು. ಬಳಿಕ ಗೃಹ ಜ್ಯೋತಿ ಯೋಜನೆ ಬಗ್ಗೆ ಮಾತಾಡಿದ ಮುಖ್ಯಮಂತ್ರಿ ಎರಡು ನೂರು ಯೂನಿಟ್ ವರೆಗೆ ವಿದ್ಯುತ್ ಉಚಿತ ಅಂತ ಹೇಳಿದ್ದೇವೆ, ಒಂದು ಕುಟುಂಬ ಸರಾಸರಿ 199 ಯೂನಿಟ್ ಬಳಸುತ್ತಿದ್ದರೆ ಆ ಕುಟುಂಬಕ್ಕೆ ಅಷ್ಟು ಯೂನಿಟ್ ವರೆಗೆ ವಿದ್ಯುತ್ ಉಚಿತ ಸಿಗುತ್ತದೆ, ಹಾಗೆಯೇ 80 ಯೂನಿಟ್ ಬಳಸುವವರಿಗೆ 80 ಯೂನಿಟ್ ಮಾತ್ರ ಉಚಿತ ಸಿಗುತ್ತದೆ ಎಂದು ಹೇಳಿದಾಗ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬೇರೆ ಸದಸ್ಯರು ಆಕ್ಷೇಪಣೆ ಎತ್ತಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ