Loading video

Video: ದೆಹಲಿಯಲ್ಲಿ ಧೂಳಿನ ಬಿರುಗಾಳಿ, ಗೋಡೆ ಕುಸಿದು ವ್ಯಕ್ತಿ ಸಾವು, ಹಲವರಿಗೆ ಗಾಯ

|

Updated on: Apr 13, 2025 | 2:50 PM

ದೆಹಲಿಯ ಹವಾಮಾನದಲ್ಲಿ ಹಠಾತ್ ಬದಲಾವಣೆ ಗೋಚರಿಸಿದೆ. ಧೂಳಿನ ಬಿರುಗಾಳಿಗೆ ಗೋಡೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೆಹಲಿಯ ಮಧು ವಿಹಾರ್‌ನಲ್ಲಿ ಗೋಡೆ ಕುಸಿದು ಅದರ ಅವಶೇಷಗಳು ವ್ಯಕ್ತಿ ಮೇಲೆ ಬಿದ್ದು ಅವರು ಸಾವನ್ನಪ್ಪಿದ್ದಾರೆ. ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ವಿಡಿಯೋದಲ್ಲಿ ಕಂಡುಬಂದಿದೆ.

ದೆಹಲಿ, ಏಪ್ರಿಲ್ 13: ದೆಹಲಿಯ ಹವಾಮಾನದಲ್ಲಿ ಹಠಾತ್ ಬದಲಾವಣೆ ಗೋಚರಿಸಿದೆ. ಧೂಳಿನ ಬಿರುಗಾಳಿಗೆ ಗೋಡೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೆಹಲಿಯ ಮಧು ವಿಹಾರ್‌ನಲ್ಲಿ ಗೋಡೆ ಕುಸಿದು ಅದರ ಅವಶೇಷಗಳು ವ್ಯಕ್ತಿ ಮೇಲೆ ಬಿದ್ದು ಅವರು ಸಾವನ್ನಪ್ಪಿದ್ದಾರೆ. ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ವಿಡಿಯೋದಲ್ಲಿ ಕಂಡುಬಂದಿದೆ. ಅವಶೇಷಗಳು ಅವರ ಮೇಲೆ ಬಿದ್ದ ನಂತರ ಅವರು ನೆಲಕ್ಕೆ ಬೀಳುತ್ತಿರುವುದನ್ನು ಸಿಸಿಟಿವಿ ವಿಡಿಯೋ ತೋರಿಸುತ್ತದೆ. 6 ಅಂತಸ್ತಿನ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿತ್ತು, ಅದರ ಗೋಡೆ ಕುಸಿದಿದೆ ಎನ್ನಲಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ