ಒಕ್ಕಲಿಗ ಸಂಘದ ಪದಾಧಿಕಾರಿಗಳೊಂದಿಗೆ ಮಾತಾಡಿರುವ ಡಿವಿ ಸದಾನಂದಗೌಡ ನಾಳೆ ಮಹತ್ತರ ನಿರ್ಧಾರ ಪ್ರಕಟಿಸುವ ಸಾಧ್ಯತೆ

|

Updated on: Mar 19, 2024 | 5:29 PM

ಅವರೊಂದಿಗೆ ಕಾಂಗ್ರೆಸ್ ಪಕ್ಷದ ನಾಯಕರು ಸಂಪರ್ಕದಲ್ಲಿದ್ದಾರಾ? ಪಕ್ಷಕ್ಕೆ ಬರುವಂತೆ ಆಹ್ವಾನವೇನಾದರೂ ಸಿಕ್ಕಿದೆಯಾ ಎಂದು ಕೇಳಿದ ಪ್ರಶ್ನೆಗೆ ಸದಾನಂದ ಗೌಡರು, ತಮ್ಮೊಂದಿಗೆ ಕಾಂಗ್ರೆಸ್ ಜೊತೆ ಬಿಜೆಪಿ ನಾಯಕರ ಸಹ ಸಂಪರ್ಕದಲ್ಲಿದ್ದಾರೆ. ಆದರೆ ಎಲ್ಲ ವಿಷಯಗಳನ್ನು ನಾಳಿನ ಪ್ರೆಸ್ ಮೀಟ್ ನಲ್ಲಿ ತಿಳಿಸುವುದಾಗಿ ಹೇಳಿದರು.

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಡಿವಿ ಸದಾನಂದ ಗೌಡ (DV Sadananda Gowda) ನಾಳೆ ತಮ್ಮ ರಾಜಕೀಯ ಬದುಕಿನ ಮಹತ್ತ್ತರ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಘಟಕ (state BJP unit) ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಅವರು ತೀವ್ರವಾಗಿ ನೊಂದುಕೊಂಡಿರುವುದು ಸುಳ್ಳಲ್ಲ. ಅವರ ಬೇಸರ, ನೋವು ವೇದನೆಯನ್ನು ಅರ್ಥಮಾಡಿಕೊಂಡಿರುವ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದಾಗ, ಖದ್ದು ಸದಾನಂದ ಗೌಡರೇ ಚಾಮರಾಜಪೇಟೆಯಲ್ಲಿ ಕಿಮ್ಸ್ ಆಸ್ಪತ್ರೆಯ (KIMS) ಬೋರ್ಡ್ ರೂಮಲ್ಲಿ ಅವರೊಂದಿಗೆ ಒಂದು ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಸಭೆಯಲ್ಲಿ ಒಂದಷ್ಟು ವಿಚಾರಗಳನ್ನು ಸಂಘದ ಪದಾಧಿಕಾರಿಗಳ ಪ್ರಸ್ತಾಪ ಮಾಡಿದ್ದಾರೆ, ಅದರೆ ಅವ್ಯಾವನ್ನೂ ತಾನು ಇವತ್ತು ಬಹಿರಂಗಪಡಿಸಲ್ಲ ಎಂದು ಹೇಳಿದ ಅವರು ನಾಳೆ ಒಂದು ಸುದ್ದಿಗೋಷ್ಟಿ ನಡೆಸಲಿದ್ದು ಅದರಲ್ಲಿ ಬಹಳಷ್ಟು ವಿಷಯಗಳನ್ನು ಮಾತಾಡುವುದಾಗಿ ಹೇಳಿದರು. ಅವರೊಂದಿಗೆ ಕಾಂಗ್ರೆಸ್ ಪಕ್ಷದ ನಾಯಕರು ಸಂಪರ್ಕದಲ್ಲಿದ್ದಾರಾ? ಪಕ್ಷಕ್ಕೆ ಬರುವಂತೆ ಆಹ್ವಾನವೇನಾದರೂ ಸಿಕ್ಕಿದೆಯಾ ಎಂದು ಕೇಳಿದ ಪ್ರಶ್ನೆಗೆ ಸದಾನಂದ ಗೌಡರು, ತಮ್ಮೊಂದಿಗೆ ಕಾಂಗ್ರೆಸ್ ಜೊತೆ ಬಿಜೆಪಿ ನಾಯಕರ ಸಹ ಸಂಪರ್ಕದಲ್ಲಿದ್ದಾರೆ. ಆದರೆ ಎಲ್ಲ ವಿಷಯಗಳನ್ನು ನಾಳಿನ ಪ್ರೆಸ್ ಮೀಟ್ ನಲ್ಲಿ ತಿಳಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಡಿವಿಎಸ್​ಗೆ ಟಿಕೆಟ್ ಮಿಸ್: ಜೆಪಿ ನಡ್ಡಾ ಕರೆ ಮಾಡಿ ಹೇಳಿದ್ದೇನು? ಎಳೆ-ಎಳೆಯಾಗಿ ಬಿಚ್ಚಿಟ್ಟ ಸದಾನಂದಗೌಡ