Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೆಟ್ಟರ್ ಅವರನ್ನು ಬಲಿಕೊಡಲು ಬಿಜೆಪಿ ನಾಯಕರು ಫೂಲ್​ಪ್ರೂಫ್ ಪ್ಲ್ಯಾನ್ ಮಾಡಿದ್ದಾರೆ: ಲಕ್ಷ್ಮಣ್ ಸವದಿ

ಶೆಟ್ಟರ್ ಅವರನ್ನು ಬಲಿಕೊಡಲು ಬಿಜೆಪಿ ನಾಯಕರು ಫೂಲ್​ಪ್ರೂಫ್ ಪ್ಲ್ಯಾನ್ ಮಾಡಿದ್ದಾರೆ: ಲಕ್ಷ್ಮಣ್ ಸವದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 19, 2024 | 4:34 PM

ಯಾವ ಕುರಿಯನ್ನು ಎಲ್ಲಿ ನಿಲ್ಲಿಸಬೇಕು ಹೇಗೆ ಅದನ್ನು ಬಲಿ ಕೊಡಬೇಕು ಅಂತ ಬಿಜೆಪಿ ನಾಯಕರು ಶಿಸ್ತುಬದ್ಧವಾಗಿ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಿದ ಸವದಿ, ಶೆಟ್ಟರ್ ಏಕಾಏಕಿ ಪಕ್ಷ ಬಿಟ್ಟರು, ಏಕಾಏಕಿಯಾಗಿ ವಾಪಸ್ಸು ಹೋದರು ಮತ್ತು ಏಕಾಏಕಿಯಾಗಿ ಸೋಲುವುದು ಕೂಡ ನಿಶ್ಚಿತ ಎಂದರು.

ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದು ಪುನಃ ಬಿಜೆಪಿಗೆ ವಾಪಸ್ಸು ಹೋದ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ತಾನು ಮಾಡಿದ ಪ್ರಮಾದಕ್ಕೆ ಪಾಠ ಕಲಿಸುವ ಯೋಜನೆ ಬಿಜೆಪಿ ನಾಯಕರಿಗಿದೆಯೇ? ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳುವ ಪ್ರಕಾರ ಶೆಟ್ಟರ್ ಅವರನ್ನು ಹರಕೆಯ ಕುರಿ ಮಾಡಲು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ (Belagavi Lok Sabha seat) ಕಣಕ್ಕಿಳಿಸುವ ಹುನ್ನಾರ ನಡೆದಿದೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸವದಿ, ಶೆಟ್ಟರ್ ಅವರಿಗೆ ಉದ್ದೇಶಪೂರ್ವಕವಾಗಿ ಬೆಳಗಾವಿ ಕರೆತಂದು ಸೋಲಿಸುವ ಪ್ರಯತ್ನ ಬಿಜೆಪಿ ನಾಯಕರಿಂದ ನಡೆಯುತ್ತಿದೆ. ಶೆಟ್ಟರ್ ಅವರಿಗೆ ಟಿಕೆಟ್ ಸಿಗಲಿಲ್ಲವೆಂಬ ಹಪಾಹಪಿ ಇರಬಾರದು, ಮತ್ತು ಅವರು ಗೆದ್ದು ಸಂಸತ್ ಪ್ರವೇಶಿಸಬಾರದು, ಸೋತು ಸುಣ್ಣವಾಗಿ ಮನೆಯಲ್ಲಿ ಕೂರುವಂತಾಗಬೇಕು-ಇದು ಬಿಜೆಪಿ ನಾಯಕರು ಶೆಟ್ಟರ್ ಅವರಿಗಾಗಿ ತೋಡಿರುವ ಖೆಡ್ಡಾ ಎಂದು ಸವದಿ ಹೇಳಿದರು. ಯಾವ ಕುರಿಯನ್ನು ಎಲ್ಲಿ ನಿಲ್ಲಿಸಬೇಕು ಹೇಗೆ ಅದನ್ನು ಬಲಿ ಕೊಡಬೇಕು ಅಂತ ಬಿಜೆಪಿ ನಾಯಕರು ಶಿಸ್ತುಬದ್ಧವಾಗಿ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಿದ ಸವದಿ, ಶೆಟ್ಟರ್ ಏಕಾಏಕಿ ಪಕ್ಷ ಬಿಟ್ಟರು, ಏಕಾಏಕಿಯಾಗಿ ವಾಪಸ್ಸು ಹೋದರು ಮತ್ತು ಏಕಾಏಕಿಯಾಗಿ ಸೋಲುವುದು ಕೂಡ ನಿಶ್ಚಿತ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:   ಬೆಳಗಾವಿಯಲ್ಲಿ ಜೋರಾಯ್ತು ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವಿರೋಧ: ರಾಜ್ಯ ನಾಯಕರು, ಹೈಕಮಾಂಡ್ ಭೇಟಿಗೆ ಮುಂದಾದ ಸ್ಥಳೀಯರು