ಯದುವೀರ್ ಪರ ಪ್ರಚಾರ ಮಾಡುತ್ತಿದ್ದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಬಗ್ಗೆ ಹೇಳಿದ್ದು ಸರಿಯೆಂದರು!
ಯದುವೀರ್ ಅವರೀಗ ಮಹಾರಾಜ ಅಲ್ಲ, ಅವರು ಹಿಂದಿನ ಒಡೆಯರ್ ಅರಸೊತ್ತಿಗೆಗೆ ಸೇರಿದವರಾಗಿದ್ದಾರೆ. ಅರಸೊತ್ತಿಗೆ, ಸಾಮ್ರಾಜ್ಯ, ಚಕ್ರಾಧಿಪತ್ಯ ಮೊದಲಾದವೆಲ್ಲ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಸಂವಿಧಾನ ಜಾರಿಗೊಡ ಬಳಿಕ ಅಳಿದುಹೋದವು. ದಸರಾ ಸಂದರ್ಭದಲ್ಲಿ ಮಾತ್ರ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲು ಯದುವೀರ್ ಖಾಸಗಿ ದರ್ಬಾರ್ ನಡೆಸುತ್ತಾರೆ ಮತ್ತು ಅದು ಅರಮನೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಪ್ರತಾಪ್ ಹೇಳಿದರು.
ಮೈಸೂರು: ತಮಗೆ ಟಿಕೆಟ್ ಸಿಗದ ಅಸಮಾಧಾನ, ಕೋಪ ಮತ್ತು ಬೇಸರವನ್ನು ಹಾಲಿ ಸಂಸದ ಪ್ರತಾಪ್ ಸಿಂಹ (Pratap Simha) ಬದಿಗೊತ್ತಿ ಟಿಕೆಟ್ ಪಡೆದಿರುವ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ಪರ ಪ್ರಚಾರ ಮಾಡಲು ಸುತ್ತಾಟ ಆರಂಭಿಸಿದ್ದಾರೆ. ಇಂದು ಕೃಷ್ಣರಾಜ ಪೇಟೆಯಲ್ಲಿ ಪ್ರಚಾರ ಮಾಡುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪ್ರತಾಪ್ ಫಾರ್ ಎ ಚೇಂಜ್ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದರು! ಸಿದ್ದರಾಮಯ್ಯನವರು ಯದುವೀರ್ ಮಹಾರಾಜಾನೇನೂ ಅಲ್ಲ, ಅವರೊಬ್ಬ ಬಿಜೆಪಿ ಅಭ್ಯರ್ಥಿ ಮಾತ್ರ ಎಂದು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ಪ್ರತಾಪ್ ಹೇಳಿದರು.
ಯದುವೀರ್ ಅವರೀಗ ಮಹಾರಾಜ ಅಲ್ಲ, ಅವರು ಹಿಂದಿನ ಒಡೆಯರ್ ಅರಸೊತ್ತಿಗೆಗೆ ಸೇರಿದವರಾಗಿದ್ದಾರೆ. ಅರಸೊತ್ತಿಗೆ, ಸಾಮ್ರಾಜ್ಯ, ಚಕ್ರಾಧಿಪತ್ಯ ಮೊದಲಾದವೆಲ್ಲ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಸಂವಿಧಾನ ಜಾರಿಗೊಡ ಬಳಿಕ ಅಳಿದುಹೋದವು. ದಸರಾ ಸಂದರ್ಭದಲ್ಲಿ ಮಾತ್ರ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲು ಯದುವೀರ್ ಖಾಸಗಿ ದರ್ಬಾರ್ ನಡೆಸುತ್ತಾರೆ ಮತ್ತು ಅದು ಅರಮನೆಗೆ ಮಾತ್ರ ಸೀಮಿತವಾಗಿರುತ್ತದೆ, ಹಾಗಾಗಿ ಅವರು ಸಿಎಂ ಸಿದ್ದರಾಮಯ್ಯ ಹೇಳಿದ ಹಾಗೆ ಬಿಜೆಪಿಯ ಅಭ್ಯರ್ಥಿ ಮಾತ್ರ ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ ತಾನು ಅಭ್ಯರ್ಥಿಯಾಗಿದ್ದರೆ 2-3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ, ಯದುವೀರ್ ಸಹ ಉತ್ತಮ ಅಂತರದಿಂದ ಗೆಲ್ಲಲಿದ್ದಾರೆ ಎಂದು ಪ್ರತಾಪ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಮೃತ್ಯುವೆನ್ನುವುದೊಂದು ತೆರೆಯಿಳಿತ, ತೆರೆಯೇರು, ಮತ್ತೆ ತೋರ್ಪುದು ನಾಳೆ; ಡಿವಿಜಿ ಸಾಲು ಹಂಚಿಕೊಂಡು ವಿರೋಧಿಗಳಿಗೆ ಪ್ರತಾಪ್ ಸಿಂಹ ಟಾಂಗ್