ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಅಹ್ವಾನಿಸಿದರೆ ಸಿದ್ದರಾಮಯ್ಯ ತಮ್ಮ ಹೆಸರನ್ನು ಸಿದ್ದರಹೀಮಯ್ಯ ಮಾಡಿಕೊಂಡು ಸ್ಪರ್ಧಿಸುತ್ತಾರೆ: ಪ್ರತಾಪ ಸಿಂಹ

ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಅಹ್ವಾನಿಸಿದರೆ ಸಿದ್ದರಾಮಯ್ಯ ತಮ್ಮ ಹೆಸರನ್ನು ಸಿದ್ದರಹೀಮಯ್ಯ ಮಾಡಿಕೊಂಡು ಸ್ಪರ್ಧಿಸುತ್ತಾರೆ: ಪ್ರತಾಪ ಸಿಂಹ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 05, 2022 | 4:07 PM

ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯನವರಿಗೆ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಹೇಳಿದರೆ, ಸಿದ್ದರಾಮಯ್ಯನವರು ತಮ್ಮ ಹೆಸರಿನಲ್ಲಿರುವ ರಾಮ ತೆಗೆದು ರಹೀಮ್ ಅನ್ನು ಸೇರಿಸಿ ಅದನ್ನು ಸಿದ್ದರಹೀಮಯ್ಯ ಅಂತ ಮಾಡಿಕೊಂಡು ಸ್ಪರ್ಧಿಸಲು ಅಣಿಯಾಗುತ್ತಾರೆ. ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ ಎಂದು ಸಿಂಹ ಹೇಳಿದರು.

ಹಿಜಾಬ್ (Hijab) ವಿಷಯದಲ್ಲಿ ಯಾರಿಗೂ ಕೋರ್ಟಿನ ತೀರ್ಪು ಬರುವವರೆಗೆ ವ್ಯವಧಾನ ಇಲ್ಲ ಅನಿಸುತ್ತಿದೆ. ಎಲ್ಲ ಪಕ್ಷಗಳ ರಾಜಕೀಯ ನಾಯಕ ತಿಳಿದ ರೀತಿಯಲ್ಲಿ ಹೇಳಿಕಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ (BJP) ಧುರೀಣರು ಹಿಜಾಬ್ ಧರಿಸುವುದು ತರವಲ್ಲ ಅಂತ ಹೇಳುತ್ತಿದ್ದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್ (Congress) ಮತ್ತು ಜೆಡಿ(ಎಸ್) (JD(S)) ನಾಯಕರು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಶಾಲಾ-ಕಾಲೇಜಿಗಳಿಗೆ ಹಿಜಾಬ್ ಧರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಅಂತ ಹೇಳುತ್ತಿದ್ದಾರೆ. ಈ ವಾದ-ವಿವಾದ ಈಗ ರಾಜ್ಯದೆಲ್ಲೆಡೆ ಮಾತ್ರವಲ್ಲ ದೇಶದ ಇತರ ಭಾಗಗಳಿಗೂ ಹರಡಿದೆ. ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ (Pratap Simha) ಅವರು ಶನಿವಾರ ಮೈಸೂರಿನಲ್ಲಿ ರಾಜ್ಯ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ (Siddaramaiah) ಅವರ ನಿಲುವನ್ನು ಪ್ರಶ್ನಿಸಿದರು. ಸಿದ್ದರಾಮಯ್ಯನವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಹಳಷ್ಟು ವಿಷಯಗಳನ್ನು ಮಾತಾಡುತ್ತಾರೆ ಹಾಗಾಗಿ ಅವರು ಆಡುವ ಮಾತನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ ಎಂದು ಸಂಸದರು ಹೇಳಿದರು.

ಗೋರಿಪಾಳ್ಯದವರಾಗಿರುವ ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯನವರಿಗೆ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಹೇಳಿದರೆ, ಸಿದ್ದರಾಮಯ್ಯನವರು ತಮ್ಮ ಹೆಸರಿನಲ್ಲಿರುವ ರಾಮ ತೆಗೆದು ರಹೀಮ್ ಅನ್ನು ಸೇರಿಸಿ ಅದನ್ನು ಸಿದ್ದರಹೀಮಯ್ಯ ಅಂತ ಮಾಡಿಕೊಂಡು ಸ್ಪರ್ಧಿಸಲು ಅಣಿಯಾಗುತ್ತಾರೆ. ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ ಎಂದು ಸಿಂಹ ಹೇಳಿದರು.

2017-18 ರಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಜಾರಗೆ ತಂದ ಸಮವಸ್ತ್ರ ಸಂಹಿತೆಗೆ ಅನುಗುಣವಾಗಿಯೇ ಉಡುಪಿ ಕಾಲೇಜಿನ ಆಡಳಿತ ಮಂಡಳಿ ಮತ್ತು ಕರ್ನಾಟಕ ಸರ್ಕಾರ ನಡೆದುಕೊಂಡಿವೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಇದನ್ನೂ ಓದಿ:   Hijab Row: ಹಿಜಾಬ್ ಹೆಸರಿನಲ್ಲಿ ಮಕ್ಕಳಲ್ಲಿ ಏಕೆ ಕೋಮು ಭಾವನೆ ಬಿತ್ತುತ್ತಿದ್ದೀರಿ?; ಹೆಚ್​ಡಿ ಕುಮಾರಸ್ವಾಮಿ ಕಿಡಿ

ಇದನ್ನೂ ಓದಿ:  Hijab Row: ಹಿಜಾಬ್ ಹೆಸರಿನಲ್ಲಿ ಮಕ್ಕಳಲ್ಲಿ ಏಕೆ ಕೋಮು ಭಾವನೆ ಬಿತ್ತುತ್ತಿದ್ದೀರಿ?; ಹೆಚ್​ಡಿ ಕುಮಾರಸ್ವಾಮಿ ಕಿಡಿ