ಪ್ರಧಾನಿ ಮೋದಿ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದವರು ಬೆಂಗಳೂರಿನಲ್ಲಿ ಹಾಕಿದ ಫ್ಲೆಕ್ಸ್‌ಗಳಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ದೂರು ದಾಖಲಿಸಿದೆ. ಅಮೆರಿಕ ಜತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ವಿಚಾರವಾಗಿ ಅಲ್ಲಿನ ಅಧ್ಯಕ್ಷ ‘ಡೊನಾಲ್ಡ್ ಟ್ರಂಪ್‌ಗೆ ಹೆದರಿದ ಮೋದಿ’ ಎಂದು ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಇದರ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಬೆಂಗಳೂರು, ಫೆಬ್ರವರಿ 9: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹಾಕಿದ್ದ ಕೆಲವು ಫ್ಲೆಕ್ಸ್‌ಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಫ್ಲೆಕ್ಸ್‌ಗಳಲ್ಲಿ, ‘ಟ್ರಂಪ್‌ಗೆ ಹೆದರಿದ ಮೋದಿ’ ಮತ್ತು ‘ಚೀನಾಗೆ ಹೆದರಿದ ಮೋದಿ’ ಎಂದು ಫ್ಲೆಕ್ಸ್‌ಗಳಲ್ಲಿ ನಮೂದಿಸಲಾಗಿತ್ತು. ಮೋದಿ ಅವರ ನಡೆಯಿಂದ ದೇಶದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಫ್ಲೆಕ್ಸ್‌ಗಳ ವಿರುದ್ಧ ಬಿಜೆಪಿ ಆಕ್ರೋಶಗೊಂಡಿದ್ದು, ಪೊಲೀಸ್ ದೂರು ದಾಖಲಿಸಿದೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಮಾಜಿ ಎಂಎಲ್ಸಿ ತುಳಸಿ ಮುನಿರಾಜು ಗೌಡ ಸೇರಿದಂತೆ ಕೆಲವು ಬಿಜೆಪಿ ನಾಯಕರು ಬೆಂಗಳೂರು ನಗರ ಕೇಂದ್ರ ವಿಭಾಗದ ಡಿಸಿಪಿಗೆ ಈ ಕುರಿತು ಔಪಚಾರಿಕ ದೂರು ಸಲ್ಲಿಸಿದ್ದಾರೆ.
Follow Us
Latest Videos
ಕುಶಿನಗರದಲ್ಲಿ ಪ್ರವಾಹದ ಸ್ಥಳಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ
ಪಂಚಮಸಾಲಿ ಗುರುಪೀಠದಲ್ಲಿ '10 ಕೋಟಿ ರೂ.' ಅನುದಾನ ದುರುಪಯೋಗ ಆರೋಪ
ಏನಾದ್ರೂ ಹೇಳಿದ್ರೆ ಅಳುತ್ತ ಕೂರ್ತೀಯ: ಶಾಸ್ತ್ರಿ ಮುಖವಾಡ ಬಯಲು ಮಾಡಿದ ಜಗ್ಗ
ಪಾಕ್ ಗಡಿ ಬಳಿ ಹೈವೇ ಮೇಲೆಯೇ ಲ್ಯಾಂಡ್ ಆದ ಭಾರತೀಯ ಸೇನಾ ಹೆಲಿಕಾಪ್ಟರ್!

