Hijab Row: ಹಿಜಾಬ್ ಹೆಸರಿನಲ್ಲಿ ಮಕ್ಕಳಲ್ಲಿ ಏಕೆ ಕೋಮು ಭಾವನೆ ಬಿತ್ತುತ್ತಿದ್ದೀರಿ?; ಹೆಚ್​ಡಿ ಕುಮಾರಸ್ವಾಮಿ ಕಿಡಿ

HD Kumaraswamy: ಕರ್ನಾಟಕದಲ್ಲಿ ಸಾಮರಸ್ಯ ಕಾಣಬೇಕು ಎಂಬ ಅಭಿಪ್ರಾಯ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಇದ್ದರೆ ಹಿಜಾಬ್ ವಿಚಾರವನ್ನು ಇಲ್ಲಿಗೇ ಬಿಡಲಿ. ಮುಖ್ಯಮಂತ್ರಿಯಾದವರು ಇಂತಹ ವಿಚಾರಗಳನ್ನು ಸರಿಯಾಗಿ ನಿಭಾಯಿಸಬೇಕು ಎಂದು ಹೆಚ್​ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

Hijab Row: ಹಿಜಾಬ್ ಹೆಸರಿನಲ್ಲಿ ಮಕ್ಕಳಲ್ಲಿ ಏಕೆ ಕೋಮು ಭಾವನೆ ಬಿತ್ತುತ್ತಿದ್ದೀರಿ?; ಹೆಚ್​ಡಿ ಕುಮಾರಸ್ವಾಮಿ ಕಿಡಿ
ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 05, 2022 | 3:43 PM

ಬೆಂಗಳೂರು: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಮೊದೆಲಲ್ಲ ಬೇಟಿ ಪಡಾವ್ ಬೇಟಿ ಬಚಾವ್ ಎನ್ನುತ್ತಿದ್ದವರು ಈಗ ಬೇಟಿ ಹಠಾವ್ ಎಂಬಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸಾಮರಸ್ಯ ಕಾಣಬೇಕು ಎಂಬ ಅಭಿಪ್ರಾಯ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಇದ್ದರೆ ಹಿಜಾಬ್ ವಿಚಾರವನ್ನು ಇಲ್ಲಿಗೇ ಬಿಡಲಿ. ಕಳೆದ ಹದಿನೈದು ದಿನಗಳಿಂದ ಹಿಜಾಬ್ ವಿವಾದ (Hijab Controversy) ಕೇಳಿ ಬರುತ್ತಿದೆ. ಮುಖ್ಯಮಂತ್ರಿಯಾದವರು ಇಂತಹ ವಿಚಾರಗಳನ್ನು ಸರಿಯಾಗಿ ನಿಭಾಯಿಸಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಮಾಜದ ವಾತಾವರಣ ಕಲುಷಿತ ಆಗದ ರೀತಿ ನೋಡಿಕೊಳ್ಳಬೇಕು. ಕರಾವಳಿ ಪ್ರದೇಶದಲ್ಲಿ ಕೆಲವು ಕಡೆ ಈ ರೀತಿಯ ಬುರ್ಖಾ ವ್ಯವಸ್ಥೆ ಇತ್ತು ಅನ್ನೋದು ನನ್ನ ಗಮನಕ್ಕೆ ಇದೆ. ಕೆಲವು ಮುಸ್ಲಿಂ ಸಮಾಜದಲ್ಲಿ ಇತ್ತೀಚಿಗೆ ಕೆಲವು ಸಂಘಟನೆಗಳು ಬೆಳೆಯುತ್ತಿವೆ. ಯಾವ ಶಾಲೆಯಲ್ಲಿ ಹಿಜಾಬ್​ಗೆ ಅನುಮತಿ ಕೊಟ್ಟಿದ್ದರೋ ಅವರು ಅದನ್ನು ಮುಂದುವರೆಸಿಕೊಂಡು ಹೋಗಲಿ. ಹೊಸದಾಗಿ ಈಗ ಕೆಲವರು ಇಂಥವಕ್ಕೆ ಯಾಕೆ ಅನುಮತಿ ಕೊಟ್ಟರು? ಹಿಂದು-ಮುಸ್ಲಿಂ ಎಂಬುದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಇಂತಹ ಭಾವನೆ ಬೆಳೆಯಲು ಯಾಕೆ ಅವಕಾಶ ಕೊಡ್ತಾ ಇದ್ದೀರಿ? ನಾಡಿನಲ್ಲಿ ಜನ ಈಗಾಗಲೇ ಸಾಯ್ತಾ ಇದಾರೆ. ಅಂಥದ್ದರಲ್ಲಿ ಇಂಥದ್ದಕ್ಕೆಲ್ಲಾ ಯಾಕೆ ಈಗ ಭಯ ಭೀತಿ ವಾತಾವರಣ ಸೃಷ್ಟಿ ಮಾಡ್ತಾ ಇದ್ದೀರಿ? ಹಿಂದಿನಿಂದ ಯಾವ ವಾತಾವರಣದಲ್ಲಿ ಶಾಲೆಗಳು ನಡೆಯುತ್ತಿತ್ತೋ ಅದೇ ವಾತಾವರಣ ಮುಂದುವರೆಯಲಿ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಡಿಕೆಶಿ- ಸಿದ್ದರಾಮಯ್ಯ ವಿರುದ್ಧ ಕಿಡಿ: ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಬ್ಬರಿಗೂ ಮುಖ್ಯಮಂತ್ರಿ ಆಗುವ ಹುಚ್ಚು. ಇಬ್ಬರಿಗೂ ಓಟು ಪಡೆಯುವ ಹುಚ್ಚು ಹೆಚ್ಚಾಗಿದೆಯೇ ವಿನಃ ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ಮನಸ್ಥಿತಿ ಇಲ್ಲ. ಬಿಜೆಪಿಯವರಿಗೆ ಕೂಡಾ ಮತ ಪಡೆಯುವ ಹುಚ್ಚು ಜಾಸ್ತಿಯಾಗಿದೆ. ಸಿದ್ದರಾಮಯ್ಯ ಒಂದು ಮಾತು ಹೇಳ್ತಾರೆ, ಡಿಕೆಶಿ ಇನ್ನೊಂದು ರೀತಿಯ ಮಾತು ಹೇಳ್ತಾರೆ. ಅವರಿಬ್ಬರಿಗೆ ಮುಸ್ಲಿಂ ಮತಗಳನ್ನು ಪಡೆಯುವ ಹುಚ್ಚು ಶುರುವಾಗಿದೆ. ಅದರ ಜೊತೆಗೆ ಮುಸ್ಲಿಂ ಪರ ಮಾತಾಡಿದರೆ ಏನು ಹೆಚ್ಚು ಕಡಿಮೆ ಆಗುತ್ತೋ ಎಂಬ ಭಯಯೂ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸಿ.ಎಂ. ಇಬ್ರಾಹಿಂ ಮೊದಲಿನಿಂದಲೂ ಜೆಡಿಎಸ್ ಜೊತೆ ಗುರುತಿಸಿಕೊಂಡವರು. ಮಧ್ಯ ಕೆಲವು ವ್ಯತ್ಯಾಸಗಳು ಆಗಿದ್ದವು. ಅವರು ಈಗ ಮತ್ತೆ ಜೆಡಿಎಸ್ ಜೊತೆ ಸೇರಿ ಮತ್ತೊಂದು ರಂಗ ರಚನೆಗೆ ಮುಂದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ. ಸಿ.ಎಂ ಇಬ್ರಾಹಿಂ ಮೊದಲಿನಿಂದ JDS ಜೊತೆ ಗುರುತಿಸಿಕೊಂಡವರಾದ್ದರಿಂದ ಅವರಿಗೆ ಜೆಡಿಎಸ್​ನಲ್ಲಿ ಸದಾ ಸ್ವಾಗತವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್​​ ಹೆಸರಲ್ಲಿ ದೇಶದ ಪುತ್ರಿಯರ ಭವಿಷ್ಯವನ್ನೇ ಲೂಟಿ ಮಾಡಲಾಗುತ್ತಿದೆ; ಉಡುಪಿ ಕಾಲೇಜು ವಿವಾದದಲ್ಲಿ ಕಾಲಿಟ್ಟ ರಾಹುಲ್ ಗಾಂಧಿ

ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡವಿದೆ, ಸರ್ಕಾರ ನಿಸ್ಸಂದೇಹವಾಗಿ ಅದನ್ನು ಮಟ್ಟ ಹಾಕಲಿದೆ ಎಂದರು ಸಚಿವ ಸುನಿಲ್ ಕುಮಾರ್

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ