MP Renukacharya: ಗ್ಯಾರಂಟಿಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ: ಎಂಪಿ ರೇಣುಕಾಚಾರ್ಯ

|

Updated on: May 30, 2023 | 10:26 AM

ಅದರೆ ಕಾನೂನು ತೊಡಕುಗಳಿಂದಾಗಿ ವಿದೇಶಗಳಿಂದ ಹಣ ವಾಪಸ್ಸು ತರುವುದು ಸಾಧ್ಯವಾಗಲಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ದಾವಣಗೆರೆ: 2014 ರಲ್ಲಿ ಅಧಿಕಾರಕ್ಕೆ ಬರುವ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂ. ಜಮಾ ಮಾಡಿಸುವ ಬಗ್ಗೆ ಹೇಳಿದ್ದರು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಟೀಕಿಸಿದ್ದನ್ನು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ತರಾಟೆಗೆ ತೆಗೆದಿಕೊಂಡಿದ್ದಾರೆ. ವಿದೇಶಿ ಬ್ಯಾಂಕ್ ಗಳಲ್ಲಿ (foreign banks) ಭಾರತೀಯರು ಠೇವಣಿ ಮಾಡಿರುವ ಹಣವನ್ನು ಭಾರತಕ್ಕೆ ತಂದಿದ್ದೇಯಾದರೆ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆ ರೂ. 15 ಲಕ್ಷ ಹಾಕಬಹುದು ಅಂತ ಹೇಳಿದ್ದರೇ ಹೊರತು ಹಣ ಜಮಾ ಮಾಡಿಸುತ್ತೇವೆ ಭರವಸೆ ನೀಡಿರಲಿಲ್ಲ. ಹಣ ತರಲು ಅವರು ಪ್ರಾಮಾಣಿಕ ಪ್ರಯತ್ನ ಕೂಡ ಮಾಡಿದರು, ಅದರೆ ಕಾನೂನು ತೊಡಕುಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ರೇಣುಕಾಚಾರ್ಯ ಹೇಳಿದರು. ಆದರೆ, ಯಾಕೆ ಹಾಕಲಿಲ್ಲ ಅಂತ ಕೇಳುವ ಮೂಲಕ ಶಿವಕುಮಾರ್ ತಾವು ನೀಡಿದ ಗ್ಯಾರಂಟಿಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಹೇಳಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ