ಕನ್ನಡ ರಾಜ್ಯೋತ್ಸವದಂದು ಇಬೈಕ್​ಗೋ ಕಂಪನಿಯ ಎರಡು ಇಲೆಕ್ಟ್ರಿಕ್ ಸ್ಕೂಟರ್​​​ಗಳೊಂದಿಗೆ ಇವಿ ಮಾರ್ಕೆಟ್ ಪ್ರವೇಶಿಸಲಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 28, 2021 | 8:11 PM

ಕಂಪನಿಯು, ತಮಿಳುನಾಡಿನ ಬೂಮ್ ಜೊತೆ ಕೈ ಜೋಡಿಸಿ ವಾಹನಗಳನ್ನು ಉತ್ಪಾದಿಸುವ ಸಾಹಸಕ್ಕೆ ಕೈ ಹಾಕಿದೆ. ಬೂಮ್ ಮೋಟಾರ್ಸ್ ನ ಸ್ವಂತ ಬ್ರ್ಯಾಂಡ್ ಅಗಿದ್ದ ಬೂಮ್ ಕಾರ್ಬೆಟ್ ಇಲೆಕ್ಟ್ರಿಕ್ ಸ್ಕೂಟರ್ ಇನ್ನು ರಗ್ಗಡ್ ಜಿ1 ಆಗಿ ಲಾಂಚ್ ಆಗಲಿದೆ. ಈ ವಾಹನಗಳನ್ನು ಕೊಯಂಬತ್ತೂರಿನ ಪ್ಲ್ಯಾಂಟ್ ನಲ್ಲಿ ಉತ್ಪಾದಿಸಲಾಗುತ್ತದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಾಡಿಗೆ ನೀಡುತ್ತಿದ್ದ ಇಬೈಕ್​ಗೋ ಸಂಸ್ಥೆಯು ತನ್ನ ಎರಡು ಸ್ಕೂಟರ್​​ಗಳೊಂದಿಗೆ ಇಲೆಕ್ಟ್ರಿಕ್ ಟೂ ವ್ಹೀಲರ್ ಮಾರ್ಕೆಟ್ ಪ್ರವೇಶಿಸಲು ನಿರ್ಧರಿದೆ. ಒಂದು ಇ ಸ್ಕೂಟರ್​​​ಗೆ, ಇಬೈಕ್ಗೊ ರಗ್ಗಡ್ ಜಿ1 ಅಂತ ಹೆಸರಿಡಲಾಗಿದ್ದು ಮತ್ತೊಂದಕ್ಕೆ ರಗ್ಗಡ್ ಜಿ1 ಪ್ಲಸ್ ಅಂತ ಕರೆಯಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಸೆಗ್ಮೆಂಟ್ನಲ್ಲಿ ಇಬೈಕ್ಗೊ ರಗ್ಗಡ್ ಜಿ1 ಬಹಳ ಮಜಬೂತ ವಾಹನ ಎಂದು ಹೇಳಲಾಗುತ್ತಿದೆ.  ಆದರೆ ಗಮನಿಸಬೇಕಿರುವ ಅಂಶವೆಂದರೆ ಇಬೈಕ್ಗೊ ಸಂಸ್ಥೆಯು ವಾಹನಗಳನ್ನು ಉತ್ಪಾದಿಸುವುದಿಲ್ಲ. ಹಿರೋ ಮೋಟಾರ್ಸ್ ಕಂಪನಿಯ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿ ಬಾಡಿಗೆ ಕೊಡುವ ವ್ಯವಹಾರ ಮಾಡುತ್ತಿತ್ತು.

ಆದರೆ ಕಂಪನಿಯು, ತಮಿಳುನಾಡಿನ ಬೂಮ್ ಜೊತೆ ಕೈ ಜೋಡಿಸಿ ವಾಹನಗಳನ್ನು ಉತ್ಪಾದಿಸುವ ಸಾಹಸಕ್ಕೆ ಕೈ ಹಾಕಿದೆ. ಬೂಮ್ ಮೋಟಾರ್ಸ್ ನ ಸ್ವಂತ ಬ್ರ್ಯಾಂಡ್ ಅಗಿದ್ದ ಬೂಮ್ ಕಾರ್ಬೆಟ್ ಇಲೆಕ್ಟ್ರಿಕ್ ಸ್ಕೂಟರ್ ಇನ್ನು ರಗ್ಗಡ್ ಜಿ1 ಆಗಿ ಲಾಂಚ್ ಆಗಲಿದೆ. ಈ ವಾಹನಗಳನ್ನು ಕೊಯಂಬತ್ತೂರಿನ ಪ್ಲ್ಯಾಂಟ್ ನಲ್ಲಿ ಉತ್ಪಾದಿಸಲಾಗುತ್ತದೆ. ವಾರ್ಷಿಕವಾಗಿ ಒಂದು ಲಕ್ಷ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಈ ಪ್ಲ್ಯಾಂಟ್ ಹೊಂದಿದೆ.

ಆಗಲೇ ಹೇಳಿದಂತೆ ರಗ್ಗಡ್ ಇ ಸ್ಕೂಟರ್ಗಳು ಎರಡು ಆವೃತ್ತಿಯಲ್ಲಿ ಸಿಗಲಿವೆ. ಜಿ1 ಬೆಲೆ ರೂ. 84,999 ಅಗಿದ್ದರೆ, ಜಿ1 ಪ್ಲಸ್ ಬೆಲೆ ರೂ. 1,04,999 ಅಗಿರಲಿದೆ. ಒಮ್ಮೆ ಚಾರ್ಜ್ ಮಾಡಿದರೆ, ಈ ವಾಹನಗಳು 160 ಕಿಮೀ ಅಂತರವನ್ನು ಕ್ರಮಿಸಿಬಲ್ಲವು ಮತ್ತು ಇವುಗಳ ಗರಿಷ್ಟ ವೇಗ ಮಿತಿ 70 ಕಿಮೀ/ಗಂಟೆ ಆಗಿದೆ.

ಇದನ್ನೂ ಓದಿ:  CPL 2021: ಡ್ರೆಸಿಂಗ್ ಕೋಣೆಯ ಕಿಟಕಿ ಗಾಜು ಒಡೆದ ಕ್ರಿಸ್ ಗೇಲ್ ಸಿಡಿಲಬ್ಬರದ ಸಿಕ್ಸರ್! ವಿಡಿಯೋ ನೋಡಿ