ಸಿಎಂ ಇಲ್ಲವೇ ಡಿಸಿಎಂ ಹೆಸರು ಉಲ್ಲೇಖಿಸುವಂತೆ ಈಡಿ ಅಧಿಕಾರಿಗಳು ಒತ್ತಡ ಹೇರಿದ್ದರು: ಬಿ ನಾಗೇಂದ್ರ

|

Updated on: Oct 16, 2024 | 3:11 PM

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸುಖಾಸುಮ್ಮನೆ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ ಮತ್ತು ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಇತರ ಕೆಲ ನಾಯಕರು ಶಾಮೀಲಾಗಿದ್ದಾರೆ, ಆದರೆ ಅವರೆಲ್ಲ ತಮ್ಮ ಪ್ರಯತ್ನಗಳಲ್ಲಿ ಯಾವತ್ತೂ ಸಫಲರಾಗಲ್ಲ ಎಂದು ನಾಗೇಂದ್ರ ಹೇಳಿದರು.

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣದಲ್ಲಿ ಪ್ರಮುಖ ಅರೋಪಿಯಾಗಿ ಈಡಿ ಮುಖಾಂತರ ಜೈಲು ಸೇರಿದ್ದ ಮಾಜಿ ಸಚಿವ ಬಿ ನಾಗೇಂದ್ರಗೆ ಜಾಮೀನು ಸಿಕ್ಕು ಹೊರಬಂದಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಈಡಿ ಅಧಿಕಾರಿಗಳು ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ, ತನ್ನ ವಿಚಾಣೆ ನಡೆಸುವಾಗ ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಇಲ್ಲವೇ ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳುವಂತೆ ತನ್ನ ಮೇಲೆ ಒತ್ತಡ ಹೇರಿದ್ದರು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿ ನಾಗೇಂದ್ರ ಸಣ್ಣ ಮೀನು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ತಿಮಿಂಗಿಲು ಎಂದ ಶೋಭಾ ಕರಂದ್ಲಾಜೆ

Published On - 3:10 pm, Wed, 16 October 24

Follow us on