ಸರ್ಕಾರದ ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವುದನ್ನು ಸಿಎಂ ಸಿದ್ದರಾಮಯ್ಯ ಕಡೆಗಣಿಸುತ್ತಿದ್ದಾರೆ!

ಸರ್ಕಾರದ ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವುದನ್ನು ಸಿಎಂ ಸಿದ್ದರಾಮಯ್ಯ ಕಡೆಗಣಿಸುತ್ತಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 16, 2024 | 1:40 PM

ಸಾರ್ವಜನಿಕರು ನೀಡುವ ತೆರಿಗೆ ಹಣದ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಬಸ್ಸಲ್ಲಿ ಹೋಗಲು ನಿರ್ಧರಿಸಿದ್ದು ಕನ್ನಡಿಗರಿಗೆ ಅಚ್ಚರಿ ಮೂಡಿಸಿದೆ. ಬಸ್ಸಿಗೆ ಇಂಧನವನ್ನು ಜನ ನೀಡುವ ತೆರಿಗೆ ಹಣದಲ್ಲೇ ಹಾಕಿಸಲಾಗುತ್ತದೆ. ಕಾರುಗಳಲ್ಲಿ ಹಿಂಬಾಲಿಸಿದವರನ್ನು ಬಸ್ಸಲ್ಲೇ ಕರೆದೊಯ್ಯಬಹುದಾಗಿತ್ತು.

ಮಂಡ್ಯ: ಜಿಲ್ಲೆಯ ತೊರೆಕಾಡನಹಳ್ಳಿಯಲ್ಲಿ ಕಾವೇರಿ ಐದನೇ ಹಂತದ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿದರು. ಮುಖ್ಯಮಂತ್ರಿ ಎಂದಿನಂತೆ ತಮ್ಮ ಕಾರಿನಲ್ಲಿ ತೆರಳುವ ಬದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಲ್ಲಿ ಹೋದರು. ಅವರ ಕಾವೇರಿ ನಿವಾಸದಿಂದ ಐರಾವತ ಬಸ್ಸು ರೋಡಿಗಿಳಿಯುವ ದೃಶ್ಯವನ್ನು ಇಲ್ಲಿ ನೋಡಬಹುದು. ಬಸ್ಸಲ್ಲಿ ಯಾರೆಲ್ಲ ಇದ್ದರು ಅನ್ನೋದು ಗೊತ್ತಾಗಲಿಲ್ಲ ಆದರೆ ಅದರ ಹಿಂದೆ ಸುಮಾರು 15 ವಾಹನಗಳು ತೊರೆಕಾಡನಹಳ್ಳಿಗೆ ತೆರಳಿದವು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಐಎಂಎ ಹಗರಣದಲ್ಲಿ ಸಿದ್ದರಾಮಯ್ಯ ಕೂಡ ಫಲಾನುಭವಿ ಎಂದ ಬಸನಗೌಡ ಪಾಟೀಲ್ ಯತ್ನಾಳ್